Mon. Apr 21st, 2025

ಬಸ್ ತಂಗುದಾಣ ಆವರಿಸಿಕೊಂಡ ಅಪಘಾತವಾದ ಲಾರಿ:ಜನರಿಗೆ ಕಿರಿಕಿರಿ

Share this with Friends

ಮೈಸೂರು,ಏ.16: ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಮಿನಿ ಲಾರಿ ಬಸ್ ತಂಗುದಾಣವನ್ನ ಆವರಿಸಿಕೊಂಡಿದ್ದು,ಪ್ರಯಾಣಿಕರಿಗೆ ತೊಂದರೆಯಾಗಿದೆ.

ಇದರಿಂದಾಗಿ ಬಸ್ ಗೆ ಕಾದುನಿಂತ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.ಆದರೂ ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲಾ.

ಮೈಸೂರಿನ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆ ಸಮೀಪದ ಬಸ್ ತಂಗುದಾಣದ ಬಳಿ ಈ ದೃಶ್ಯ ಕಂಡು ಬರುತ್ತಿದೆ.

ಪ್ರಯಾಣಿಕರು ಬಸ್ ಗಾಗಿ ಕಾಯುವಾಗ ನೆರಳು ಇರಲಿ ಎಂಬ ಉದ್ದೇಶದಿಂದ ವಿವಿ ಪುರಂ ಸಂಚಾರಿ ಠಾಣೆ ಸಮೀಪ ಮೈಸೂರು ಮಹಾನಗರ ಪಾಲಿಕೆ ತಂಗುದಾಣ ನಿರ್ಮಿಸಿದೆ.

ಆದರೆ ಈ ಬಸ್ ತಂಗುದಾಣದ ಮುಂದೆ ಅಪಘಾತಕ್ಕೆ ಸಿಲುಕಿ ನಜ್ಜುಗುಜ್ಜಾದ ಮಿನಿ ಲಾರಿಯನ್ನು ನಿಲ್ಲಿಸಲಾಗಿದೆ,ಆದ್ದರಿಂದ ಬಸ್ ಗಾಗಿ ತಂಗುದಾಣದಲ್ಲಿ ಇರಬೇಕಿದ್ದ ಪ್ರಯಾಣಿಕರು ಲಾರಿ ಅಡ್ಡನಿಂತ ಪರಿಣಾಮ ರಸ್ತೆ ಮೇಲೆ ಬಂದು ನಿಲ್ಲುವಂತಾಗುದೆ.

ಅಪಘಾತಕ್ಕೆ ಸಿಲುಕಿ ಪೊಲೀಸರ ವಶದಲ್ಲಿರುವ ವಾಹನಗಳನ್ನ ಪಾರ್ಕಿಂಗ್ ಮಾಡಲು ಠಾಣೆಯ ಹಿಂಭಾಗ ಸ್ಥಳ ಮೀಸಲಿದೆ.

ಆದರೂ ಅಪಘಾತಕ್ಕೆ ಸಿಲುಕಿ ಹಾನಿಯಾದ ಲಾರಿ ತಂಗುದಾಣದ ಮುಂಭಾಗ ನಿಲ್ಲಿಸಿರುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ.

ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗುವ ವಾಹನಗಳನ್ನ ಧಿಢೀರ್ ಪ್ರತ್ಯಕ್ಷವಾಗಿ ಲಾಕ್ ಮಾಡಿ ದಂಡ ವಸೂಲಿ ಮಾಡುವ ಸಂಚಾರಿ ಪೊಲೀಸರಿಗೆ ಈ ಲಾರಿ ಉಂಟು ಮಾಡುತ್ತಿರುವ ಕಿರಿಕಿರಿ ಕಾಣಿಸುತ್ತಿಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಕೂಡಲೇ ಸಂಚಾರಿ ಪೊಲೀಸರು ಎಚ್ಚೆತ್ತು ಲಾರಿಯನ್ನ ತೆರುವುಗೊಳಿಸಿ ಬಸ್ ಗಾಗಿ ಕಾಯುವ ಜನರಿಗೆ ಒಳಿತು ಮಾಡುವರೆ ಕಾದು ನೋಡಬೇಕಿದೆ.


Share this with Friends

Related Post