ಮೈಸೂರು, ಜು.13: ಇದೆಂಥಾ ದುರಂತ, ಆಷಾಢ ಶುಕ್ರವಾರದ ದಿನ ನಮ್ಮ ಮೈಸೂರಿನ ಮಹಾರಾಜರನ್ನು ಪೊಲೀಸರು ಬಂಧಿಸಿದರೆಂದು ಜೆಡಿಎಸ್,ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮುಡಾ ಅಕ್ರಮದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಜೊತೆಯಾಗಿ ಮೈಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಕಾರ್ಯಕರ್ತರು ಮೆರವಣಿಗೆ ಪ್ರಾರಂಭಿಸುತ್ತಿದ್ದಂತೆ ಪೊಲೀಸರು ಎಲ್ಲರನ್ನು ತಡೆದರು.ಪ್ರತಿಭಟನೆಯಲ್ಲಿ ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡಾ ಪಾಲ್ಗೊಂಡಿದ್ದರು.
ಪೊಲೀಸರು ಯದುವೀರ್ ಸೇರಿದಂತೆ ಎಲ್ಲಾ ಬಿಜೆಪಿ,ಜೆಡಿಎಸ್ ಮುಖಂಡರನ್ನು ಬಂಧಿಸಿ ಬಸ್ ನಲ್ಲಿ ಕರೆದೊಯ್ದರು.
ಇದೀಗ ಯದುವೀರ್ ಬಂಧಿಸಿದ್ದಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ.ಇತಿಹಾಸದಲ್ಲಿ ಇದೇ ಮೊದಲು ಮೈಸೂರಿನ ಮಹಾರಜರನ್ನು ಬಂಧಿಸಲಾಗಿದೆ,ಮುಡಾ ಅಕ್ರಮದ ವಿರುದ್ಧ
ಧ್ವನಿ ಎತ್ತಿದಕ್ಕೆ ಯದುವೀರ್ ಒಡೆಯರ್ ಅವರ ಬಂಧನ ಮಾಡಲಾಯಿತು, ಈ ಸರ್ಕಾರ ಅಕ್ರಮ ಮಾಡಿದ್ದಲ್ಲದೆ ಮಹಾರಾಜರನ್ನು ಬಂಧಿಸಿ ಇತಿಹಾಸ ಮಾಡಿದೆ ಎಂದು ಗೇಲಿ ಮಾಡಿದ್ದಾರೆ.
ಆದರೆ ಜನ,ಸಾಮಾನ್ಯರು ಯದುವೀರ್ ಪ್ರತಿಭಟನೆಯಲ್ಲಿ ಭಾಗವಹಿದ್ದು ಸರಿಯಾಗಿಯೇ ಇದೆ.ರಾಜಕೀಯಕ್ಕೆ ಬಂದ ಮೇಲೆ ಇದೆಲ್ಲಾ ಸಾಮಾನ್ಯ ಅವರೂ ಕೂಡಾ ಸಾಮಾನ್ಯ ಜನರಂತೆಯೇ ಇರುವುದು ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿದ್ದಾರೆ.