Fri. Nov 1st, 2024

ಚಾಮುಂಡಿ ಬೆಟ್ಟದ ಮಹಿಳಾ ಸಿಬ್ಬಂದಿಗೆ ಬಾಗಿನ ವಿತರಿಸಿದ‌ ಶ್ರೀ ದುರ್ಗಾ ಫೌಂಡೇಶನ್

Share this with Friends

ಮೈಸೂರು,ಜು.24: ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಮಹಿಳಾ ಸಿಬ್ಬಂದಿಗಳಿಗೆ ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ನಿಂದ ಬಾಗಿನ ವಿತರಿಸಲಾಯಿತು.

ಸೀರೆ, ಬಳೆ, ಕುಂಕುಮ, ಅರಿಶಿನ, ವಿಳ್ಳೆದೆಲೆ, ಅಡಿಕೆ, ಹೂ, ತೆಂಗಿನಕಾಯಿ ಸಹಿತ ಬಾಗಿನ ನೀಡಲಾಯಿತು.

ಈ ವೇಳೆ ಮಾತನಾಡಿದ ಚಾಮುಂಡಿ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಅವರು,ಅಷಾಢ ಮಾಸದ ಸಂಧರ್ಭದಲ್ಲಿ ಚಾಮುಂಡಿ ಬೆಟ್ಟಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಬರುತ್ತಾರೆ, ಹಾಗಾಗಿ ಭಕ್ತರ ಅನೂಕೂಲಕ್ಕಾಗಿ ಸಾರಿಗೆ ವ್ಯವಸ್ಥೆ, ಅನ್ನದಾಸೋಹ, ಮೂಲಭೂತ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ, ಸಾರ್ವಜನಿಕರು ಪ್ಲಾಸ್ಟಿಕ್ ಕವರುಗಳನ್ನು ಬಳಸದೆ ಬಟ್ಟೆ ಬ್ಯಾಗ್ ಗಳನ್ನು ಮನೆಯಿಂದಲೇ ತರಬೇಕು, ಬೆಟ್ಟದಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ಪ್ರತಿವರ್ಷದಂತೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಬಾಗಿನ ಸಮರ್ಪಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು

ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷೆ ರೇಖಾ ಶ್ರೀನಿವಾಸ್ ಮಾತನಾಡಿ,
ಮೈಸೂರು ಪ್ರಾಂತ್ಯದಲ್ಲಿ ಆಷಾಢ ಮಾಸವೆಂದರೇ ದೇವಿ ಆರಾಧನೆಗೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಸೇವೆಸಲ್ಲಿಸುವ ಮಹಿಳಾ ಭದ್ರತಾ ಸಿಬ್ಬಂದಿಗೆ, ಸ್ವಚ್ಚತಾ ಸಿಬ್ಬಂದಿಗೆ ಬಾಗಿನ ನೀಡುತ್ತಿರುವುದು ಖುಷಿಯಾಗಿದೆ, ಅವರಲ್ಲೂ ಹಬ್ಬದ ಸಡಗರ ಮನೆಮಾಡಿದೆ, ಕಾರ್ಯನಿರ್ವಹಿಸಲು ಅವರಲ್ಲಿ ಮತ್ತಷ್ಟು ಆತ್ಮ ಸ್ಥೈರ್ಯ ತುಂಬಿದಂತಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಆರ್.ಹೆಚ್ ಪವಿತ್ರ, ದೇವಸ್ಥಾನದ ಅರ್ಚಕರಾದ ಸೋಮಣ್ಣ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ,ಲತಾ ಮೋಹನ್, ಸಮಾಜ ಸೇವಕರಾದ ಶಾಂತ, ಜಿ ರಾಘವೇಂದ್ರ, ಪವನ್ ಸಿದ್ದರಾಮು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಚಾಲಕ ಸಂತೋಷ್ ಕಿರಾಲು, ಬೈರತಿ ಲಿಂಗರಾಜು, ರವಿಚಂದ್ರ, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.


Share this with Friends

Related Post