Fri. Nov 1st, 2024

ಪ್ರತಿಯೊಬ್ಬರೂ ಡಿ. ದೇವರಾಜ ಅರಸರನ್ನು ನೆನೆಯಬೇಕು-ಡಾ. ಡಿ.ತಿಮ್ಮಯ್ಯ

Share this with Friends

ಮೈಸೂರು: ಧ್ವನಿ ಇಲ್ಲದವರಿಗೆ ಧ್ವನಿಯನ್ನು ಕೊಟ್ಟವರು ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ ಅರಸು ಅವರು,ಅವರನ್ನು ಪ್ರತಿಯೊಬ್ಬರೂ ನೆನೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಹೇಳಿದರು.

ನಗರದ ರೋಟರಿ ಶಾಲಾಸಭಾಂಗಣದಲ್ಲಿ
ಕರ್ನಾಟಕ ಸೇನಾ ಪಡೆ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳ ಲಾಗಿದ್ದ ಹಿಂದುಳಿದ ವರ್ಗಗಳ ಧೀಮಂತ ನಾಯಕ, ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಿ ದೇವರಾಜ ಅರಸರು ಪ್ರಾರ್ತ ಸ್ಮರಣೀಯರು, ‌ಅವರ ಆಡಳಿತ ಕಾಲದಲ್ಲಿ ಹಿಂದುಳಿದವರಿಗೆ, ದೀನ ದಲಿತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಪ್ರತಿಯೊಂದು ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಮಾಡಿದರು ಎಂದು ಸ್ಮರಿಸಿದರು.

ಹಿಂದೆ ಇದ್ದ ಮಲ ಹೊರುವ ಪದ್ಧತಿಯನ್ನು ನಿರ್ಮೂಲನೆ ಗೊಳಿಸಿದರು, ಉಳುವವನಿಗೆ ಭೂಮಿ ಎಂದು ಹಲವಾರು ನಿರ್ಗತಿಕರಿಗೆ ಭೂಮಿಯನ್ನು ಕೊಡಿಸಿಕೊಟ್ಟ ಮಹಾ ನಾಯಕ.ಅರಸು ಹೆಸರಿನಲ್ಲಿ ಕರ್ನಾಟಕ ಸೇನಾ ಪಡೆ ಸೇವಾ ರತ್ನ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಡಿ.ತಿಮ್ಮಯ್ಯ ಮೆಚ್ಚುಗೆ‌ ವ್ಯಕ್ತಪಡಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಕಂದಾಯ) ಜಿ.ಎಸ್. ಸೋಮಶೇಖರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ- ಡಾ. ಫ್ರೊ. ಎನ್ ಲಕ್ಷ್ಮೀ, ಡೀನ್, ಕರಾಮುವಿನಿ, ಸಮಾಜಸೇವೆ ಕ್ಷೇತ್ರದಲ್ಲಿ- ಎಸ್ ಬಸವೇಗೌಡ, ಮುಖ್ಯಸ್ಥರು, ಎಸ್ ಎಂ ಪಿ ಕನ್ಸ್ಟ್ರಕ್ಷನ್, ಪೋಲಿಸ್ ಸೇವಾ ಕ್ಷೇತ್ರದಲ್ಲಿ ಎನ್ ಸಿ. ನಾಗೇಗೌಡ, ಆರಕ್ಷಕ ನಿರೀಕ್ಷಕರು, ಕೆ ಆರ್ ಪೋಲಿಸ್ ಠಾಣೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ- ಬಿಳಿಗಿರಿರಂಗ, ಮುಖ್ಯಸ್ಥರು, ಸ್ನಾತಕೋತ್ತರ ಸಸ್ಯ ಶಾಸ್ತ್ರ ವಿಭಾಗ, ಜೆಎಸ್ಎಸ್, ನಿರ್ವಹಣಾ ಕ್ಷೇತ್ರದಲ್ಲಿ – ಡಾ. ಚಿರಂತ್ ಕೆ ಎಂ, ಸಹಾಯಕ ಪ್ರಾಧ್ಯಾಪಕರು ವಿಟಿಯು ಇವರುಗಳಿಗೆ ಶ್ರೀ ಡಿ. ದೇವರಾಜ ಅರಸು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡಾದ ಅಧ್ಯಕ್ಷ ಸಿ ಮರಿಸ್ವಾಮಿ ರವರು ವಹಿಸಿದ್ದರು. ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೆರೆವೇರಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಸಬಾದ ವಲಯ ಉಪಾಧ್ಯಕ್ಷ ಡಾ. ಬಿ ಆರ್ ನಟರಾಜ್ ಜೋಯ್ಸ್, ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ. ರಂ. ಶ್ರೀನಿವಾಸ ಗೌಡ ಮತ್ತಿತರರು ಹಾಜರಿದ್ದರು.


Share this with Friends

Related Post