Fri. Dec 27th, 2024

ಎಲ್ಲಾನೂ ದೇವರು ನೋಡ್ಕೋತಾನೆ: ಡಿ.ಕೆ ಸುರೇಶ್ ಭಾವುಕ ನುಡಿ

Share this with Friends

ರಾಮನಗರ,ಜೂ.10: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಡಿಕೆ ಸುರೇಶ್ ಅವರಿಗೆ ಸೋಲಾಗಿದ್ದು, ಆತ್ಮಾವಲೋಕನ ಸಭೆಯಲ್ಲಿ ಅವರು ಭಾವುಕರಾದರು.

ಕನಕಪುರದ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡುತ್ತಿದ್ದಾಗ ಡಿ.ಕೆ ಸುರೇಶ್ ಕಣ್ಣೀರು ಹಾಕಿದ್ದಾರೆ.

ಸೋತಿದ್ದೀನಿ ಅಂತಾ ಸುಮ್ಮನೆ ಕೂರುವುದಿಲ್ಲ, ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅನ್ನುತ್ತಿದ್ದಿರಿ ಇನ್ನು ನಿಮ್ಮ ಮನೆಗೂ ಬರುವೆ, ನಿಮ್ಮಗಳ ಬೀದಿಗೂ ಬರುತ್ತೇನೆ. ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೆಯಲ್ಲೇ ಇದ್ದು ಮಾಡುವೆ ಎಂದು ಹೇಳಿದರು.

ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡುತ್ತೇನೆ ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ,ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡಿಕೊಳ್ಳುತಾನೆ ಎಂದು ಡಿ.ಕೆ ಸುರೇಶ್ ಕಣ್ಣಾಲಿ ತುಂಬಿಕೊಂಡು ನುಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾಕ್ಟರ್ ಮಂಜುನಾಥ್ ಅವರು 2,69,647 ಮತಗಳ ಅಂತರದಿಂದ ಡಿ.ಕೆ.ಸುರೇಶ್ ಅವರನ್ನು ಪರಾಭವಗೊಳಿಸಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಡಿ.ಕೆ.ಸುರೇಶ್‍ಗೆ ತೀವ್ರ ನಿರಾಸೆಯಾದಂತಾಗಿದೆ.


Share this with Friends

Related Post