Thu. Dec 26th, 2024

ಸೂರಜ್ ರೇವಣ್ಣ ವಿರುದ್ಧ ಆರೋಪ; ದೂರು ಬಂದರೆ ಕ್ರಮ: ಜಿ. ಪರಮೇಶ್ವರ್

Share this with Friends

ಬೆಂಗಳೂರು,ಜೂ.22: ಸೂರಜ್ ರೇವಣ್ಣ ವಿರುದ್ಧ ಆರೋಪ ಕುರಿತು ಇದುವರೆಗೆ ಯಾವುದೇ ದೂರು ಬಂದಿಲ್ಲ, ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚುವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಪ್ರಕರಣದ ಬೆಳವಣಿಗೆ ನೋಡಿ ಸಿಐಡಿಗೆ ವಹಿಸುತ್ತೇವೆ,ಮೊದಲು ದೂರು ಬರಲಿ ಎಂದು ಹೇಳಿದರು.

ನನಗೆ ಯಾವುದೇ ಪತ್ರವಾಗಲೀ ದೂರಾಗಲೀ ಬಂದಿಲ್ಲ, ಸೂರಜ್ ರೇವಣ್ಣ ಆಗಲಿ, ಆ ದೂರುದಾರ ಆಗಲಿ ಎಲ್ಲೂ ದೂರು ಕೊಟ್ಟಿಲ್ಲ. ಯಾವುದೇ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.


Share this with Friends

Related Post