Mon. Dec 23rd, 2024

ಆಕ್ರಮ ಮರಳು ಧಂಧೆ ವರದಿ ಮಾಡಿದ ಪತ್ರಕರ್ತನ ಅಪಹರಿಸಿದ ಆರೋಪ

Share this with Friends

ವಿಜಯಪುರ: ಭೀಮಾತೀರದಲ್ಲಿ ಅಕ್ರಮ ಮರಳು ದಂಧೆಕೋರರ ಹಾವಳಿ ಬಗ್ಗೆ ವರದಿ ಮಾಡಿದ ಪತ್ರಕರ್ತನನ್ನು ಅಪಹರಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಿಂದಗಿ ತಾಲೂಕಿನ ಭೀಮಾತೀರದ ಬಗಲೂರು, ಶಂಬೆವಾಡ, ಶಿರಸಗಿ ಸುತ್ತಮುತ್ತ ಅಕ್ರಮ ಮರಳು ದಂಧೆ ಜೋರಾಗಿದ್ದು ರಾತ್ರಿಯಾದರೆ ಜೆಸಿಬಿ, ಟ್ರ್ಯಾಕ್ಟರ್, ಲಾರಿಗಳದ್ದೆ ಸದ್ದು ಕೇಳಿಬರುತ್ತದೆ.

ರಾತ್ರಿ 10 ಗಂಟೆ ಶುರುವಾಗುವ ಅಕ್ರಮ ಮರಳು ದಂಧೆ ನಸುಕಿನ ಜಾವ 5 ಗಂಟೆ ವರೆಗು ಭೀಮಾನದಿಯ ಮರಳನ್ನು ದಂಧೆಕೋರರು ಸಾಗಾಟ ಮಾಡುತ್ತಾರೆ ಎಂದು ಸಿಂದಗಿ ಪಟ್ಟಣದ ಪತ್ರಕರ್ತ ಗುಂಡು ಕುಲಕರ್ಣಿ ಅವರನ್ನು ಪೊಲೀಸರು ಅಪಹಿರಿಸಿದ್ದಾರೆ ಎಂದು ಸಿಪಿಐ ನಾನಾಗೌಡ ಪಾಟೀಲ, ಹಾಗೂ ಸಿಬ್ಬಂದಿ ಸುರೇಶ ಕೊಂಡಿ ಅವರ ಮೇಲೆ ಆರೋಪ ಕೇಳಿ ಬಂದಿದೆ.

ಪತ್ರಕರ್ತ ಗುಂಡು ಕುಲಕರ್ಣಿ ಅವರನ್ನು ಸಿಪಿಐ ನಾನಾಗೌಡ ಪಾಟೀಲ್ ಹಾಗೂ ಸಿಬ್ಬಂದಿ ಅಪಹರಿಸಿ ಭೀಮಾತೀರದ ಘತ್ತರಗಿ ಬ್ರೀಡ್ಜ್ ಮೇಲೆ ಕೊಂಡೊಯ್ದು ಹಣೆಗೆ ಕಂಟ್ರಿಪಿಸ್ತೂಲ ಬಂದೂಕಿಟ್ಟು ಬೆದರಿಸಿ ಜೀವಬೆದರಿಕೆ ಹಾಕಿದ್ದ ಆರೋಪ ಹಿನ್ನಲೆ ವಿಜಯಪುರ ಜಿಲ್ಲಾಧಿಕಾರಿ, ಗೃಹ ಇಲಾಖೆ ಕಾರ್ಯದರ್ಶಿ, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ಗುಂಡು ಕುಲಕರ್ಣಿ ದೂರನ್ನು ನೀಡಿದ್ದಾರೆ. ಈ ಒಂದು ಪ್ರಕರಣವನ್ನು ಜಿಲ್ಲಾಡಳಿತ ಯಾವ ರೀತಿ ಪರಿಗಣಿಸುತ್ತಾರೆ ಎಂದು ಕಾದು ನೋಡಬೇಕಿದೆ.


Share this with Friends

Related Post