Mon. Dec 23rd, 2024

ಅಂಬರೀಶ್ ಹುಟ್ಟುಹಬ್ಬ: ವಿದ್ಯಾರ್ಥಿನಿ ವ್ಯಾಸಂಗಕ್ಕೆ ಧನಸಹಾಯ

Share this with Friends

ಮೈಸೂರು, ಮೇ.31: ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನ ಪ್ರಯುಕ್ತ ಸಚ್ಚಿದಾನಂದ ಯುವ ಬ್ರಿಗೇಡ್ ವತಿಯಿಂದ ವಿದ್ಯಾರ್ಥಿನಿಗೆ ಧ‌ನ ಸಹಾಯ ಮಾಡಲಾಯಿತು.

ನಗರದ ಅಶೋಕ ಪುರಂ ನಿವಾಸಿ
ದಿವಂಗತ ರವಿ ಹಾಗೂ ಆಷಾ ದಂಪತಿ ಪುತ್ರಿ ಸಂಜನಾ ಅವರಿಗೆ ದ್ವಿತೀಯ ಪಿಯುಸಿ ವ್ಯಾಸಂಗಕ್ಕಾಗಿ ಧನಸಹಾಯ ಮಾಡುವ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಸಚ್ಚಿದಾನಂದ ಯುವ ಬ್ರಿಗೇಡ್ ಅಧ್ಯಕ್ಷ ಬೈರತಿ ಲಿಂಗರಾಜು ಮಾತನಾಡಿ,
ಪ್ರತಿಯೊಂದು ಮಗುವು ಶಿಕ್ಷಣ ಪಡೆಯಬೇಕು ಶಿಕ್ಷಣ ಪಡೆಯುವ ಹಕ್ಕು ಮಕ್ಕಳದ್ದು ಎಂದು ಹೇಳಿದರು.

ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಹಾಗಾಗಿ ಪ್ರತಿವರ್ಷ ಕಡುಬಡವರ ಮಕ್ಕಳ ಶಾಲಾ ಮತ್ತು ಕಾಲೇಜು ಫೀ ತುಂಬುವ ಮೂಲಕ ಅವರ ಶಿಕ್ಷಣಕ್ಕೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದಂದು ಅವರ ಸ್ಮರಣೆಯಲ್ಲಿ ಪ್ರತಿ ವರ್ಷ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತೇವೆ ಎಂದು ಹೇಳಿದರು

ಲಿಂಗರಾಜು, ಪ್ರಕಾಶ್ ಪ್ರಿಯದರ್ಶನ್, ನಾಗರಾಜ್ ಬಿಲ್ಲಯ್ಯ, ರವಿಚಂದ್ರ ಮತ್ತಿತರರು ಹಾಜರಿದ್ದರು


Share this with Friends

Related Post