Mon. Dec 23rd, 2024

ಬಸವಣ್ಣನವರ ಕೊಡುಗೆ,ಅವರ ಸೇವೆ ಸ್ಮರಿಸುವಂತದ್ದು:ಅಮಿತ್ ಶಾ ಹೇಳಿಕೆ

Share this with Friends

ಸುತ್ತೂರು, ಫೆ.11: ಬಸವಣ್ಣ ನವರು ಒಂದು ವರ್ಗಕ್ಕಲ್ಲ ದೇಶ ಹಾಗೂ ಜಗತ್ತಿಗೇ ಭಕ್ತಿ ಭಾವನೆ ತುಂಬಿದ ಮಹಾಪುರುಷರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿಂದು ಭಾಗವಹಿಸಿ ಮಾತನಾಡಿದರು.

ಕರ್ನಾಟಕ ಪುಣ್ಯಭೂಮಿಯಲ್ಲಿ ಬಸವಣ್ಣರನ್ನ ನೆನೆಸುತ್ತೇನೆ.
ಬಸವಣ್ಣನವರ ಕೊಡುಗೆ,ಅವರ ಸೇವೆ ಸ್ಮರಿಸುವಂತದ್ದು ಎಂದು ತಿಳಿಸಿದರು.

ಸುತ್ತೂರು ಮಠ 24 ಪೀಠಾಧಿಪತಿಗಳನ್ನ ಕಂಡಿದೆ,ಅವರೆಲ್ಲರಿಗೂ ನನ್ನ ಪ್ರಣಾಮಗಳು ಎಂದು ಮಾತು ಪ್ರಾರಂಭಿಸಿದ ಅಮಿತ್ ಶಾ
ಕರ್ನಾಟಕದಂತಹ ಪವಿತ್ರ ಭೂಮಿಯಲ್ಲಿ ನಿಂತು ಎಲ್ಲರಿಗೂ ನಮಸ್ಕರಿಸುತ್ತೇನೆ ಎಂದು ನಿಂತು ಕೈ ಮುಗಿದರು.

ಸುತ್ತೂರು ಸಂಸ್ಥೆಯ ವತಿಯಿಂದ ಹಲವು ರೀತಿಯ ಸೇವೆಗಳ ನಡೆಯುತ್ತಿದೆ.‌ಇಲ್ಲಿ 350ಕ್ಕೂ ಹೆಚ್ಚು ಸಂಸ್ಥೆಗಳಿವೆ. 20,000 ಸಿಬ್ಬಂದಿ ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ ಇವೆಲ್ಲವೂ ಉತ್ತಮವಾದ ಕಾರ್ಯ ಎಂದು ಶ್ಲಾಘಿಸಿದರು.

ಸುತ್ತೂರು ಶ್ರೀಗಳು ದಿವ್ಯಾಂಗರಿಗಾಗಿ ಪಾಲಿಟೆಕ್ನಿಕ್ ಕಾಲೇಜು ತೆರೆದಿರುವುದು ಕೂಡಾ ಪುಣ್ಯದ ಕೆಲಸವಾಗಿದೆ ಎಂದು ಹೇಳಿದರು.

ಸುತ್ತೂರು ಶ್ರೀಗಳು ಅಯೋಧ್ಯೆಯಲ್ಲಿ ಸುತ್ತೂ‌ರು ಶಾಖಾ ಮಠ ಮಾಡುವ ಮನಸ್ಸು ಮಾಡಿದ್ದಾರೆ,ಅವರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಅಮಿತ್ ಶಾ‌ ತಿಳಿಸಿದರು.

ಆ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ, ಕಾಶಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್, ಉಜ್ಜಯಿನಿಯಲ್ಲಿ ಮಹಾ ಕಾಳೇಶ್ವರ ಕಾರಿಡಾರ್ ಸೇರಿದಂತೆ ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಹ ಕಾರ್ಯ ಮಾಡಿದ್ದಾರೆ.

ಉತ್ತಮ ಕೊಡುಗೆಯನ್ನು ದೇಶಕ್ಕೆ ನೀಡುವ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಪುನರುತ್ಥಾನ ಮಾಡುತ್ತಿದ್ದಾರೆ ಎಂದು ಶಾ ಹೇಳಿದರು.

ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ‌ಸಚಿ‌ವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ, ವಿಪಕ್ಷ ನಾಯಕ ಆರ್. ಅಶೋಕ್, ಸಿ.ಟಿ. ರವಿ, ಪ್ರಭಾಕರ್ ಕೋರೆ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಿದ್ದರು.


Share this with Friends

Related Post