Mon. Dec 23rd, 2024

ಅಮಿತ್‌ ಶಾ ಭರ್ಜರಿ‌ ಗೆಲುವು

Share this with Friends

ನವದೆಹಲಿ,ಜೂ.4: ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿಯ ಅತ್ಯಂತ ಪ್ರಮುಖ ನಾಯಕರೂ ಗೃಹಸಚಿವರಾದ‌ ಅಮಿತ್‌ ಶಾ ಭರ್ಜರಿ‌ ಗೆಲುವು ಸಾಧಿಸಿದ್ದಾರೆ.

ಗಾಂಧಿನಗರ ಕ್ಷೇತ್ರದಲ್ಲಿ ಮತಗಳ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಥ್ರಿಲ್ ಹೆಚ್ಚುತ್ತಲೇ ಹೋಗಿತ್ತು.ಪ್ರಾರಂಭದಿಂದಲೂ ಅಮಿತ್ ಶಾ 167170 ಮತಗಳಿಂದ ಮುನ್ನಡೆಯಲ್ಲಿದ್ದರು.ಅದೇ ಮುನ್ನಡೆಯನ್ನು ಅವರು ಕೊನೆತನಕ ಸಾಧಿಸುತ್ತಲೇ ಬಂದರು.

ಐಎನ್‌ಸಿಯ ಸೋರ್ ಪಟೇಲ್ ಅವರನ್ನು
ಭಾರೀ ಮತಗಳ ಅಂತರದಿಂದ ಅಮಿತ್‌ ಶಾ‌ ಮಣಿಸಿದ್ದಾರೆ.

ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಅಂತಿಮ ಲೋಕಸಭಾ ಚುನಾವಣಾ ಫಲಿತಾಂಶ‌ ಹೊರಬಂದಿದ್ದು,ಅಮಿತ್ ಶಾ 5.5 ಲಕ್ಷ ಮತಗಳ ಭಾರೀ ಅಂತರದಿಂದ‌‌ ಜಯಭೇರಿ ‌ಭಾರಿಸಿದ್ದಾರೆ,ಇದು ಒಂದು‌ ರೀತಿ ದಾಖಲೆಯ ಗೆಲುವಾಗಿದೆ.


Share this with Friends

Related Post