ಮೈಸೂರು, ಮೇ.16: 12 ವರ್ಷದ ಬಾಲಕಿ
ಕ್ಯಾನ್ಸರ್ ನಿಂದ ಬಳಲುತ್ತಿದ್ದು,ಆರ್ಥಿಕ ನೆರವಿಗೆ ಪೋಷಕರು ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆ, ಪಾಂಡವಪುರ ತಾಲ್ಲೂಕು, ಕೆನ್ನಾಳು ಗ್ರಾಮದ ನಿವಾಸಿ ಭಾವನ ಕೆ.ಎಸ್. ಮತ್ತು ಶ್ರೀ ಸುಂದರೇಶ್ ಇ. ಅವರ ಪುತ್ರಿ 12 ವರ್ಷದ ಪೂರ್ವಿಕ ಕೆ.ಎಸ್.’ಬಿ’ ಕೋಶ ತೀವ್ರ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದಾಳೆ.
ಈಕೆಗೆ ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ ಮಾಡಿಸಬೇಕಾಗಿದ್ದು, ಸುಮಾರು 40 ರಿಂದ 45 ಲಕ್ಷ ರೂ. ಖರ್ಚಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಲಾಯಿತು.
ಪೂರ್ವಿಕಳ ತಂದೆ ಸುಂದರೇಶ್ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈ ಮಗುವಿನ ಚಿಕತ್ಸೆಗೆ ಹಣ ಹೊಂದಿಸಲು ಕಷ್ಟವಾಗುತ್ತಿದೆ. ಈ ಮಗುವಿಗೆ ಕಿದ್ವಾಯ್‌ನಲ್ಲಿ ಚಿಕಿತ್ಸೆ ನೀಡಿ ಈಗ ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಯವಿಟ್ಟು ಈ ಮಗುವಿಗೆ ದಾನಿಗಳು ಸಹಾಯ ಮಾಡಬೇಕಾಗಿ ಮಗುವಿನ ಪೋಷಕರ ಪರವಾಗಿ ಲಯನ್ಸ್ ಕ್ಲಬ್ ಮೈಸೂರು ಗೋಲ್ಡನ್ ಸಿಟಿಯವರು ಕೋರಿದರು.
ಮಗುವಿನ ತಾಯಿಯ ಬ್ಯಾಂಕ್ ವಿವರ ಹೀಗಿದೆ : K.S. Bhavana,
State Bank of India,
Darasaguppe Branch,
A/c No. 39333115926
IFSC: SBIN0041018
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಮೈಸೂರು ಗೋಲ್ಡನ್ ಸಿಟಿ ಅಧ್ಯಕ್ಷ ಲಯನ್ ಟಿ. ಸುರೇಶ್ ಗೋಲ್ಡ್, ಕಾರ್ಯದರ್ಶಿ ಲಯನ್ ಪ್ರಮೀಳಾ ಎಸ್., ಕರ್ನಾಟಕ ಸೇನಾಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಲಯನ್ ಮಂಜುನಾಥ ಆರ್., ಲಯನ್ ಶಂಕರ್ ಗುರು, ಮಗು ಪೂರ್ವಿಕ, ತಾಯಿ ಭಾವನ ಹಾಜರಿದ್ದರು.