ಬೆಂಗಳೂರು, ಮಾ.18: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಡಿ.ವಿ ಸದಾನಂದ ಗೌಡ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ಬೆಂಗಳೂರಿನ ಸದಾನಂದ ಗೌಡ ಅವರ ಮನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕರಾದ ಡಾ. ಸಿ. ಎನ್ ಅಶ್ವತ್ ನಾರಾಯಣ, ಮುನಿರಾಜು ಮತ್ತಿತರರು ಆಗಮಿಸಿ, ಹೂಗುಚ್ಛ ನೀಡಿ ಶುಭ ಕೋರಿದರು.ಈ ವೇಳೆ ಡಿವಿಎಸ್ ಪತ್ನಿ ಡಾಟಿ ಹಾಜರಿದ್ದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲು ಇಚ್ಚಿಸಿದ್ದ ಸದಾನಂದ ಗೌಡರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ, ಹಾಗಾಗಿ ಅವರು ಬೇಸರಗೊಂಡಿದ್ದಾರೆ.
ಹಾಗಾಗಿ ಅಶೋಕ್, ಅಶ್ವಥ್ ನಾರಾಯಣ ಇಂದು ಹುಟ್ಟು ಹಬ್ಬದ ಶುಭಾಶಯ ಹೇಳುವ ನೆಪದಲ್ಲಿ ಸದಾನಂದ ಗೌಡರ ಮನವೊಲಿಸುವ ಪ್ರಯತ್ನ ಮಾಡಿದರು.
ಆದರೆ ಸದಾನಂದ ಗೌಡರು ನಾನು ಚುನಾವಣೆಗೆ ಸ್ಪರ್ಧಿಸುವುದು ಬೇಡ ರಾಜಕೀಯ ನಿವೃತ್ತಿ ಪಡೆದು ಆರಾಮವಾಗಿರ ಬೇಕೆಂದುಕೊಂಡಿದ್ದೆ, ನನ್ನನ್ನು ಬಲವಂತವಾಗಿ ಟಿಕೆಟ್ ಕೊಡುವುದಾಗಿ ನಂಬಿಸಿ ಕರೆತಂದರು.
ಆದರೆ ಈಗ ಟಿಕೆಟ್ ನೀಡದೆ ನಿರ್ಲಕ್ಷಿಸಿದ್ದಾರೆ ಇದು ನನಗೆ ಬೇಸರ ತರಿಸಿದೆ ನನ್ನ ಬೆಂಬಲಿಗರ ಜತೆ ಚರ್ಚಿಸಿ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಮತ್ತು ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಮಾಧ್ಯಮದವರಿಗೆ ಎಲ್ಲವನ್ನು ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದು ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಇದರ ನಡುವೆ ಕಾಂಗ್ರೆಸ್ ನಾಯಕರು ಸದಾನಂದ ಗೌಡರು ತಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ನಾಳೆ ಡಿ.ವಿ ಸದಾನಂದ ಗೌಡರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವರು ರಾಜಕೀಯ ನಿವೃತ್ತಿ ಪಡೆಯುತ್ತಾರೋ ಇಲ್ಲ ಕಾಂಗ್ರೆಸ್ ಗೆ ಸೇರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೊ ಎಂಬುದನ್ನು ಕಾದು ನೋಡಬೇಕಿದೆ