Sun. Dec 22nd, 2024

JOB ALERT: ಉದ್ಯೋಗ ವಾರ್ತೆ : ಕೆಎಸ್ಆರ್’ಟಿಸಿ ಬಸ್ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

Share this with Friends

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಬೇಕು ಎಂಬ ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ.

ಕೆಎಸ್ಆರ್’ಟಿಸಿ ಸಂಸ್ಥೆಯಲ್ಲಿ ಖಾಲಿ ಇರುವ ಬಸ್ ಚಾಲಕ ಹುದ್ದೆಗಳಿಗೆ ಆಯಾ ಬಸ್ ಡಿಪೋಗಳು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಆಸಕ್ತರು ಅರ್ಜಿ ಸಲ್ಲಿಸಲು ತಿಳಿಸಿದೆ.

ಬೆಂಗಳೂರು ನಗರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಮಂಗಳೂರು ವಿಭಾಗಗಳ ಡಿಪೋಗಳಲ್ಲಿ KSRTC ಬಸ್ ಚಾಲಕ ಹುದ್ದೆಗಳು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಈ ಕೂಡಲೆ ಕೆಳಕಂಡ ದಾಖಲೆಗಳನ್ನು www.jobs.wisdomsecurity.in ಗೆ ಭೇಟಿ ನೀಡುವಂತೆ ಗುತ್ತಿಗೆ ಪಡೆದ ಸಂಸ್ಥೆ ತಿಳಿಸಿದೆ.
ವಿ.ಸೂ : ಮಹಿಳಾ ಚಾಲಕರು ಸಹ ಅರ್ಜಿ ಸಲ್ಲಿಸಬಹುದು.

ಅಗತ್ಯ ದಾಖಲೆಗಳು

  1. ಆಧಾರ್ ಕಾರ್ಡ್
  2. Heavy Badge ಇರುವ ಚಾಲನಾ ಪರವಾನಗಿ.
  3. ಅಂಕಪಟ್ಟಿ ಪ್ರತಿ ಅಥವಾ ವರ್ಗಾವಣಾ ಪ್ರಮಾಣ ಪತ್ರ (TC)

ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. ಕನಿಷ್ಠ 7ನೇ ತರಗತಿ ಪಾಸಾಗಿರಬೇಕು.
  2. Heavy Badge ಲೈಸನ್ಸ್ ಮಾಡಿಸಿ ಕನಿಷ್ಠ 2 ವರ್ಷಗಳಾಗಿರಬೇಕು.
  3. ವಯಸ್ಸಿನ ಮಿತಿ 50 ವರ್ಷ ಮೀರಿರಬಾರದು.

ಆಯ್ಕೆ ಆದವರಿಗೆ ಇಎಸ್’ಐ, ಪಿಎಫ್, ವಿಮೆ, ಓಟಿ, ಜಿಲ್ಲೆಯೊಳಗೆ ಓಡಾಡಲು ಬಸ್ ಪಾಸ್, ಇನ್’ಸೆನ್ಟಿವ್ ಸೌಲಭ್ಯ ಸೇರಿ 23,000 ರೂಗಳ ಸಂಬಳ ಸಿಗಲಿದೆ. (ಷರತ್ತುಗಳು ಅನ್ವಯ)

ಹೆಚ್ಚಿನ ವಿವರಗಳಿಗೆ ಮೊ.ಸಂಖ್ಯೆ 9945230211, 9535553075, 9591058169, 7204907555 ಗಳಿಗೆ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಕರೆ ಮಾಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/07/2024

ಆಸಕ್ತರು ಸಂಪರ್ಕಿಸಬೇಕಾದ ವಿಳಾಸ : ವಿಸ್ಡಂ ಗ್ರೂಪ್, #106, 40ಅಡಿ ರಸ್ತೆ, ಸಿಟಿ ಆಸ್ಪತ್ರೆ ಎದುರು, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಂಜುನಾಥ ನಗರ, ಬೆಂಗಳೂರು – 560010.


Share this with Friends

Related Post