Mon. Dec 23rd, 2024

KSRTC JOBS: ಕೆಎಸ್ಆರ್’ಟಿಸಿಯಲ್ಲಿ ಬಸ್ ಚಾಲಕರ ಹುದ್ದೆಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನ

Share this with Friends

ಬೆಂಗಳೂರು, ಆ.20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯಲ್ಲಿ ಬಸ್ ಚಾಲಕರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೆಎಸ್ಆರ್’ಟಿಸಿ ಸಂಸ್ಥೆಯ ಕೋಲಾರ ವಿಭಾಗದಲ್ಲಿ ಬಸ್ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅನುಭವಿ ಚಾಲಕರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಿ. ಈ ನೇಮಕಾತಿಯು ಹೊರಗುತ್ತಿಗೆ ಆಧಾರದ ಮೇಲೆ ನಡೆಯುತ್ತಿದ್ದು, ಆಸಕ್ತ ಆರ್ಹರು ಅರ್ಜಿ ಸಲ್ಲಿಸಬಹುದು.

ಕೋಲಾರ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ KSRTC ಸಂಸ್ಥೆಯಲ್ಲಿ ಬಸ್ ಚಾಲಕರಾಗಲು ಬಯಸುವವರು ಈ ಕೂಡಲೆ ಕೆಳಕಂಡ ದಾಖಲೆಗಳೊಂದಿಗೆ
https://www.supreethenterprises.in/career.html ವೆಬ್ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ಗುತ್ತಿಗೆ ಪಡೆದು ಸಂಸ್ಥೆ ತಿಳಿಸಿದೆ.

ಅಗತ್ಯ ದಾಖಲಾತಿಗಳು

  1. ಆಧಾರ್ ಕಾರ್ಡ್
  2. Heavy Badge ಇರುವ ಚಾಲನಾ ಪರವಾನಗಿ ಪ್ರತಿ
  3. ಅಂಕಪಟ್ಟಿ ಪ್ರತಿ

ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. ಕನಿಷ್ಠ 7ನೇ ತರಗತಿ ಪಾಸಾಗಿರಬೇಕು.
  2. Heavy Badge ಲೈಸನ್ಸ್ ಮಾಡಿಸಿ ಕನಿಷ್ಠ 2 ವರ್ಷಗಳಾಗಿರಬೇಕು.
  3. ವಯಸ್ಸಿನ ಮಿತಿ 50 ವರ್ಷ ಮೀರಿರಬಾರದು.

ಆಯ್ಕೆ ಆದವರಿಗೆ ಇಪಿಎಫ್ (PF), ಓವರ್ ಟೈಮ್ ಭತ್ಯೆ (OT), ಇನ್’ಸೆನ್ಟಿವ್ ಸೌಲಭ್ಯ ಸೇರಿ ಆಕರ್ಷಕ 23,000 ರೂಗಳ ಸಂಬಳ ಸಿಗಲಿದೆ. (ಶರತ್ತುಗಳು ಅನ್ವಯ)

ಹೆಚ್ಚಿನ ವಿವರಗಳಿಗೆ ಮೊ.ಸಂಖ್ಯೆ 7022004478, 9740271909, 9945230211 ಮೊಬೈಲ್ ಸಂಖ್ಯೆಗಳಿಗೆ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ಕರೆ ಮಾಡಬಹುದು. 2024ರ ಆಗಸ್ಟ್ 25ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಚಾಲಕರು ಬೇಗ ಬೇಗ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಭಾಗವಹಿಸಿ.

ಅಂಚೆ ಮುಖಾಂತರ ಅರ್ಜಿ ಸಲ್ಲಿಸುವವರು #201, ಬಸವ ನಿಲಯ, 2ನೇ ಅಡ್ಡರಸ್ತೆ, ಮುನೇಶ್ವರ ಬ್ಲಾಕ್, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು – 560086 ಈ ವಿಳಾಸಕ್ಕೆ ಕಳುಹಿಸಲು ತಿಳಿಸಿದೆ.


Share this with Friends

Related Post