Tue. Dec 24th, 2024

ಅಪ್ಪು ಜನ್ಮದಿನ:ಅಭಿಮಾನಿಗಳ ಸಾಗರ

Share this with Friends

ಬೆಂಗಳೂರು, ಮಾ.17: ಕನ್ನಡ ನಾಡಿನ ಕಣ್ಮಣಿ, ಅಭಿಮಾನಿಗಳ ಪ್ರೀತಿಯ ಅಪ್ಪು , ಪುನೀತ್ ರಾಜಕುಮಾರ್ ಅವರ ಜನ್ಮದಿನ ಇಂದು.

ಹಾಗಾಗಿ ಇಂದು ಅಪ್ಪು ಸಮಾಧಿ ಸ್ಥಳಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಪುನೀತ್ ನಮ್ಮನಿಲ್ಲ ಅಗಲಿ ಮೂರು ವರ್ಷಗಳು ಕಳೆದರೂ ಇಂದಿಗೂ ಜನತೆ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಪ್ರತಿದಿನ ಸ್ಮರಿಸುತ್ತಲೇ‌‌ ಇದ್ದಾರೆ.

ಬೆಳಗಿನಿಂದಲೇ ಅಪ್ಪು ಸಮಾಧಿಯ ಬಳಿ ಸಾವಿರಾರು ಮಂದಿ ಅಭಿಮಾನಿಗಳು ಧಾವಿಸಿ ಹೂಗಳನ್ನು ಇಟ್ಟು, ನಮಸ್ಕರಿಸಿದರು, ಕೆಲವರು ಕೇಕುಗಳನ್ನು ತಂದು ಎಲ್ಲರಿಗೂ ಹಂಚಿ ಖುಷಿ ಪಡುತ್ತಿದ್ದು ಕಂಡುಬಂದಿತು.

ಸಮಾಧಿ ಸ್ಥಳವನ್ನು ಬಣ್ಣ ಬಣ್ಣದ ಗುಲಾಬಿ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆನೇ ರಾಘವೇಂದ್ರ ರಾಜಕುಮಾರ್ ಮತ್ತು ಮನೆಯವರು, ಚಿನ್ನೇ ಗೌಡರು, ಅಶ್ವಿನಿ ಪುನೀತ್ ರಾಜಕುಮಾರ್,ಡಾ‌ ರಾಜ್ ಕುಮಾರ್ ಕುಟುಂಬದ ಅನೇಕರು ಬಂದು ಪುನೀತ್ ಸಮಾಧಿಗೆ ನಮಸ್ಕರಿಸಿದರು.


Share this with Friends

Related Post