Sun. Dec 29th, 2024

ಅಪ್ಪು ಜನ್ಮದಿನ ಸ್ಫೂರ್ತಿದಿನವಾಗಿ ಆಚರಣೆ ಅರ್ಥಪೂರ್ಣ: ಯದುನಂದನ್

Share this with Friends

ಮೈಸೂರು, ಮಾ.18:
ಶ್ರೀ ಚಾಮುಂಡೇಶ್ವರಿ ಯುವಕರ ಬಳಗದ ವತಿಯಿಂದ ಚಾಮುಂಡಿ ಬೆಟ್ಟದ ಪಾದದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ಸಿಹಿ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ನಗರ ಉಪಾಧ್ಯಕ್ಷ ಯದುನಂದನ್,
ಪುನೀತ್ ಸಾವಿಗೂ ಮೊದಲು ರಾಜ್ಯದ ಬಹಳಷ್ಟು ಜನತೆಗೆ ಅವರು ಮಾಡಿದ್ದ ಸಾಮಾಜಿಕ ಸೇವೆ ಗೊತ್ತಿರಲಿಲ್ಲ. ಬಲಗೈಯಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ರೀತಿಯಲ್ಲಿ ಅಸಹಾಯಕರ ನೆರವಿಗೆ ಅಪ್ಪು ನಿಂತಿದ್ದರು ಎಂದು ಸ್ಮರಿಸಿದರು.

ಅವರುಬ ಚಿತ್ರಗಳು ಹಾಗೂ ಸಾಮಾಜಿಕ ಸೇವೆ ಮೂಲಕ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದರು. ಪುನೀತ್ ಜನ್ಮದಿನವನ್ನು ಸ್ಫೂರ್ತಿದಿನ ಎಂದು ಆಚರಿಸುತ್ತಿರುವುದು ಅರ್ಥಪೂರ್ಣವಾ ಗಿದೆ ಎಂದು ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ಯುವಕರ ಬಳಗದ ಸದಸ್ಯರಾದ ಭಾಸ್ಕರ್, ಚಂದ್ರು ,ರವಿ, ಹೇಮಂತ್, ಅಜಯ್, ಶೇಖರ್,ಸಾಗರ್, ಮಹದೇವಸ್ವಾಮಿ ಸೇರಿದಂತೆ ಅಪಾರ ಅಭಿಮಾನಿಗಳು ಹಾಜರಿದ್ದರು.


Share this with Friends

Related Post