Fri. Apr 4th, 2025

ಆರ್ಮಿ ನೇಮಕಾತಿ ರ್‍ಯಾಲಿ: ನೂಕುನುಗ್ಗಲು-ಲಾಠಿ ಪ್ರಹಾರ

Share this with Friends

ಬೆಳಗಾವಿ: ಆರ್ಮಿ ನೇಮಕಾತಿಗಾಗಿ ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಆಯೋಜಿಸಿದ್ದ ಓಪನ್ ರ್‍ಯಾಲಿ ವೇಳೆ ಭಾರೀ ನೂಕುನುಗ್ಗಲು ಉಂಟಾಗಿ ಹಲವರು ಗಾಯಗೊಂಡಿದ್ದಾರೆ.

ಈ ಓಪನ್ ರ್‍ಯಾಲಿಯಲ್ಲಿ ಭಾಗವಹಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾರೀ ಸಂಖ್ಯೆಯಲ್ಲಿ ಯುವಕರು ಬಂದಿದ್ದರು.

ಬೆಳಗಾವಿಯ ಮರಾಠಾ ರೆಜಿಮೆಂಟ್ ನಲ್ಲಿ ಅಂದಾಜು 28 ಸಾವಿರ ಯುವಕರು ಆಗಮಿಸಿ ಆರ್ಮಿ ಸೆಲೆಕ್ಷನ್ ಗಾಗಿ ಕಾದು ಕುಳಿತಿದ್ದರು.

ಇದ್ದಕ್ಕಿದ್ದಂತೆ ಅಭ್ಯರ್ಥಿಗಳು ಸಲಿನಿಂದ ನುಗ್ಗಿದ ಪರಿಣಾಮ ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿ ಕೆಲವರು ಯುವಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು, ಸೈನಿಕರು ಹರಸಾಹಸಪಟ್ಟರು ಅಲ್ಲದೆ ಒಂದು ಹಂತದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು.


Share this with Friends

Related Post