ಬೆಂಗಳೂರು, ಜು.7: ಬೆಂಗಳೂರಿನ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿದರು.

ಅಶೋಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಡೇಂಗ್ಯು ಪೀಡಿತ ರೋಗಿಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ನಂತರ ವೈದ್ಯರನ್ನು ಭೇಟಿಯಾಗಿ ರೋಗ ಪೀಡಿತರ ಬಗ್ಗೆ ಹಾಗೂ ಔಷಧೋಪಚಾರದ ಕುರಿತು ಮಾಹಿತಿ ಪಡೆದರು.
ಈ ವೇಳೆ ಶಾಸಕ ಕೆ.ಸಿ.ರಾಮಮೂರ್ತಿ,ಮುಖಂಡ ಸೋಮಶೇಖರ್ ಮತ್ತಿತರರು ಸಾತ್ ನೀಡಿದರು.