Fri. Nov 1st, 2024

ಮೂವರು ಸರಗಳ್ಳರ ಬಂಧಿಸಿದಅಶೋಕಪುರಂ ಪೊಲೀಸರು

Share this with Friends

ಮೈಸೂರು,ಜೂ.25: ಮೈಸೂರಿನ ಅಶೋಕಪುರಂ ಪೊಲೀಸು ಮೂವರು ಸರಗಳ್ಳರನ್ನು ಬಂಧಿಸಿ,5.5 ಲಕ್ಷ ಬೆಲೆಯ‌ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ
೧ನೇ ಮತ್ತು ೨ನೇ ಆರೋಪಿ ಅಶೋಕಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿದ್ದು, ೧ನೇ ಮತ್ತು
೩ನೇ ಆರೋಪಿಗಳು ವಿ.ವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.

ಆರೋಪಿಗಳಿಂದ ೨ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ೫,೫೦,೦೦೦ ರೂ ಬೆಲೆಯ ೬೨ ಗ್ರಾಂ
ತೂಕದ ೨ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಗಳ ಬಂಧನದಿಂದ ಅಶೋಕಪುರಂ ಹಾಗೂ ವಿ.ವಿ. ಪುರಂ ಪೊಲೀಸ್ ಠಾಣೆಗಳ ತಲಾ ಒಂದೊಂದು ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ಉಪವಿಭಾಗದ ಎಸಿಪಿ ಹೆಚ್.ಬಿ
ರಮೇಶ್‌ಕುಮಾರ್ ನೇತೃತ್ವದಲ್ಲಿ ಅಶೋಕಪುರಂ ಠಾಣೆಯ ಇನ್ಸ್ ಪೆಕ್ಟರ್ ರೋಹಿತ್.ಸಿ ಈ, ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ ನಾಗೇಗೌಡ ಎನ್.ಸಿ, ಪಿ.ಎಸ್.ಐ ಹರೀಶ್, ಲಕ್ಕಪ್ಪ ಕುಕ್ಕಡಿ, ಪ್ರತಿಭಾ ಜಂಗವಾಡ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Share this with Friends

Related Post