Mon. Dec 23rd, 2024

ಜಗಳ ಬಿಡಿಸಲು ಬಂದ ಕಂಡಕ್ಟರ್‌‌ ಗೆ ಹಲ್ಲೆ:ಮಹಿಳೆ ವಿರುದ್ದ ಪ್ರಕರಣ ದಾಖಲು

Share this with Friends

ಮೈಸೂರು,ಮಾ.31: ಜಗಳ ಬಿಡಿಸಲು ಬಂದ ಕಂಡಕ್ಟರ್‌‌ ಗೆ ಹಲ್ಲೆ ಮಾಡಿದ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ

ಬಸ್ ನಲ್ಲಿ ಇಬ್ಬರು ಮಹಿಳೆಯರು ಜಗಳವಾಡುತ್ತಿದ್ದನ್ನು ಬಿಡಿಸಲು ಹೋದ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ.

ಇದೀಗ ಮಹಿಳೆ ವಿರುದ್ಧ ಕಂಡಕ್ಟರ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನಿಂದ ಮೇಲುಕೋಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಜೆ.ಎಸ್.ಎಸ್.ಡೆಂಟಲ್ ಕಾಲೇಜು ಬಳಿ ಇಬ್ಬರು ಮಹಿಳೆಯರು ಜಗಳ ಆಡಿದ್ದಾರೆ.

ಆಗ ಇಬ್ಬರನ್ನೂ ಸಮಾಧಾನಪಡಿಸಲು ಕಂಡಕ್ಟರ್ ಉದಯಕುಮಾರ್ ಪ್ರಯತ್ನಿಸಿದ್ದಾರೆ.ಅವರಲ್ಲಿ ಒಬ್ಬ ಮಹಿಳೆ ಉದಯಕುಮಾರ್ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನ ಕಿತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆಗ ಕಂಡಕ್ಟರ್ ನೆರವಿಗೆ ಬಂದ ಚಾಲಕ ಬಸವರಾಜ್ ಕೊಂಗಿ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದಾಗ ಮಹಿಳೆ ಇಳಿದು ಹೋಗಿ ಬಿಟ್ಟಿದ್ದಾಳೆ.

ಹಲ್ಲೆ ನಡೆಸಿದ ಮಹಿಳೆ ಮಂಡಿಮೊಹಲ್ಲಾ ನಿವಾಸಿ ಕೌಸರ್ ಬಾನು ಎಂದು ತಿಳಿದುಬಂದಿದ್ದು ಆಕೆಯ ಮೇಲೆ ನಿರ್ವಾಹ ಉದಯಕುಮಾರ್ ಎನ್.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


Share this with Friends

Related Post