Mon. Dec 23rd, 2024

ಪೊಲೀಸರಿಗೆ ಸಾಕ್ಷಿ ಹೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ:ನಾಲ್ವರ ವಿರುದ್ದ ಎಫ್ಐಆರ್

Share this with Friends

ಮೈಸೂರು,ಮೇ.31: ಪಕ್ಕದ ಮನೆಯ ಯುವತಿಯೊಬ್ಬಳ ರಕ್ಷಣೆಗಾಗಿ ಪೊಲೀಸರಿಗೆ ಸಾಕ್ಷಿ ಹೇಳಿದರೆಂದು ಮಹಿಳೆ ಮೇಲೆ ತೀವ್ರ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಏಕಲವ್ಯನಗರದಲ್ಲಿ ಈ ಘಟನೆ ನಡೆದಿದ್ದು,ಲಕ್ಷ್ಮಿ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.

ಸುರೇಶ,ನಂದೀಶ,ರಂಗಪ್ಪ ಹಾಗೂ ಲಕ್ಷ್ಮಿ ಹಲ್ಲೆ ನಡೆಸಿದವರು.ಯುವತಿಯೊಬ್ಬಳ ರಕ್ಷಣೆಗಾಗಿ ಲಕ್ಷ್ಮಿ ಅವರು ಪೊಲೀಸರಿಗೆ ಸಾಕ್ಷಿ ಹೇಳಿದ್ದಾರೆ.

ಮಗನ ವಿರುದ್ದ ಸಾಕ್ಷಿ ಹೇಳಿದ್ದೀಯ ಎಂದು ಲಕ್ಷ್ಮಿ ಮೇಲೆ ತಿರುಗಿಬಿದ್ದ ಸುರೇಶ್,ನಂದೀಶ್,ರಂಗಪ್ಪ ಹಾಗೂ ಲಕ್ಷ್ಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ.

ಈ ಸಂಭಂಧ ಹಲ್ಲೆಗೆ ಒಳಗಾದ ಲಕ್ಷ್ಮಿ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ದ ದೂರು ನೀಡಿದ್ದು,ಎಫ್ಐಆರ್ ದಾಖಲಾಗಿದೆ.


Share this with Friends

Related Post