ಮೈಸೂರು, ಏ.20: ರಾಜ್ಯಕ್ಕೆ ಈ ವರ್ಷ ಸಮೃದ್ಧಿಯಾಗಿ ಮಳೆ ಬರಲೆಂದು ವರುಣ ದೇವನನ್ನು ಪ್ರಾರ್ಥಿಸಿ ಅತಿ ರುದ್ರಯಾಗ ಪೂಜೆಯನ್ನು ಕಾವೇರಿ ಕ್ರಿಯಾ ಸಮಿತಿ ಹಮ್ಮಿಕೊಂಡಿದೆ.
ಮೈಸೂರಿನ ಕಾವೇರಿ ಕ್ರಿಯಾ ಸಮಿತಿಯು, ಕಳೆದ ಐದು ತಿಂಗಳಿಂದ ಕಾವೇರಿ ನೀರಿನ ವಿಚಾರವಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಪ್ರತಿನಿತ್ಯ ಮೈಸೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಿಕೊಂಡು ಬರುತ್ತಿದೆ.
ಅದರ ಅಂಗವಾಗಿ ಇಂದು ಬೆಳಿಗ್ಗೆ 7 ಗಂಟೆಗೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ,
ನಂತರ ಮಡಿಕೇರಿಯ ತಲಕಾವೇರಿಯಲ್ಲಿ ಅತಿ ರುದ್ರಯಾಗ ಮಾಡಿಸಲು ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಪ್ರಯಾಣ ಬೆಳೆಸಿದರು.
ಅತಿ ರುದ್ರಯಾಗ ಪೂಜೆಯನ್ನು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ನೇತೃತ್ವದಲ್ಲಿ ಮಡಿಕೇರಿಯ ತಲಕಾವೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾವೇರಿ ಕ್ರಿಯಾಸಮಿತಿ ಕಾರ್ಯದರ್ಶಿ
ತೇಜೇಶ್ ಲೋಕೇಶ್ ಗೌಡ ಮತ್ತಿತರರು ಪಾಲ್ಗೊಂಡಿದ್ದಾರೆ.