Mon. May 5th, 2025

ರೇವಣ್ಣ ನಿವಾಸದಲ್ಲೂ ಎಫ್ ಎಸ್ ಎಲ್ ಪರಿಶೀಲನೆ

Share this with Friends

ಹಾಸನ,ಮೇ.13: ಪ್ರಜ್ವಲ್ ನಿವಾಸದಲ್ಲಿ ಎಸ್ ಎಫ್ ಎಲ್ ತಜ್ಞರ ತಂಡ ಪರಿಶೀಲನೆ ಪೂರ್ಣಗೊಳಿಸಿ, ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ತೆರಳಿತು.

ಇನ್ಸ್‌ಪೆಕ್ಟರ್ ಸ್ವರ್ಣ ನೇತೃತ್ವದ ತಂಡ ಪರಿಶೀಲನೆ ನಡೆಯಿತು, ಮೇ.೪ ರಂದು ಸಂತ್ರಸ್ತ ಮಹಿಳೆಯ ಜೊತೆ ಬಂದು ಸಂಸದರ ನಿವಾಸದಲ್ಲಿ ಎಸ್ಐಟಿ ತಂಡ ಸ್ಥಳ ಮಹಾಜರ್ ಮಾಡಿ ಮಾಹಿತಿ ಸಂಗ್ರಹಿಸಿ ನಿವಾಸವನ್ನು ಎಸ್ಐಟಿ ವಶಕ್ಕೆ ಪಡೆದು ತೆರಳಿತ್ತು,

ಇಂದು ಅತ್ಯಾಚಾರ ಆರೋಪ ಕುರಿತು ಇತರೆ ಸಾಕ್ಷಿ ಮಾಹಿತಿ ಸಂಗ್ರಹಿಸಿತು, ಹೊಳೆನರಸೀಪುರ ನಿವಾಸದಲ್ಲೂ ಅತ್ಯಾಚಾರ ಎಸೆಗಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿರುವ ಹಿನ್ನೆಲೆಯಲ್ಲಿ ಹೊಳೆನರಸೀಪುರ ಚೆನ್ನಾಂಬಿಕ ನಿವಾಸದಲ್ಲೂ ಎಫ್ ಎಸ್ ಎಲ್ ತಂಡ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.


Share this with Friends

Related Post