Tue. Nov 5th, 2024

ವಿಶೇಷ ಮತಗಟ್ಟೆಗಳಲ್ಲಿ‌ ವಿಶಿಷ್ಟ ಉಡುಗೆತೊಟ್ಟು ಗಮನ ಸೆಳೆದ ಸಿಬ್ಬಂದಿ

Share this with Friends

ಮೈಸೂರು, ಏ. 27: ಈ‌ ಬಾರಿಯ ಲೋಕಸಭಾ ಚುನಾವಣೆ ವೇಳೆ ಅನೇಕ ವಿಶೇಷತೆಗಳು ಗಮನ ಸೆಳೆದಿವೆ.

ನಂಜನಗೂಡು ತಾಲ್ಲೂಕು ವೀಶೇಷ ಮತಗಟ್ಟೆಗಳಲ್ಲಿ ಚುನಾವಣಾ ಸಿಬ್ಬಂದಿ ವಿಷಯಾಧಾರಿತ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದರು.

ತಾಂಡವಪುರ, ಹುಲ್ಲಹಳ್ಳಿ ಯತ್ನಿಕ್‌ ಮತಗಟ್ಟೆಯಲ್ಲಿ ಪುರುಷ ಸಿಬ್ಬಂದಿ ಬಿಳಿ‌ಪಂಚೆ , ಬಿಳಿ‌ಶರ್ಟ್ , ಶಲ್ಯ, ಮೈಸೂರು‌ ಪೇಟ ತೊಟ್ಟಿದ್ದರು, ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಗುಲಾಬಿ ಬಣ್ಣದ ಉಡುಗೆತೊಟ್ಟಿದ್ದರು.

ಬಂಕಹಳ್ಳಿಯ ಹಾಡಿ‌ ಮತಗಟ್ಟೆಗಳಲ್ಲಿ ಪುಕ್ಕದ ಕಿರೀಟ, ನಡುವಿಗೆ ಸೊಪ್ಪಿನಿಂದ ಸುತ್ತಿಕೊಂಡು ಸಿಬ್ಬಂದಿ ಗಮನ ಸೆಳೆದರು, ಇತ್ತ ದೇವಿರಮ್ಮನಹಳ್ಳಿ ಪಾಳ್ಯದ ಯುವ ಮತಗಟ್ಟೆಯಲ್ಲಿ ಸಿಬ್ಬಂದಿ ಗರಿ ಗರಿ ಕೋಟು ಧರಿಸಿ ಹಾಜರಾಗಿದ್ದರು.

ಸಿಂಧುವಳ್ಳಿ ಗ್ರಾಮ ಪಂಚಾಯಿತಿಯ ಕುರಹಟ್ಟಿ ಗ್ರಾಮದ ಸಖಿ‌ಮತಗಟ್ಟೆಗೆ ಸ್ವಸಹಾಯಸ ಸಂಘದ ಮಹಿಳೆಯರು ಪಿಂಕ್ ಸೀರೆ ಧರಿಸಿ ಹಕ್ಕು ಚಲಾಯಿಸಲು ಬಂದಿದ್ದು ಕಂಡು ಜನ ಪ್ರಶಂಸಿದರು.


Share this with Friends

Related Post