Mon. Dec 23rd, 2024

ಮುಸ್ಲಿಂ ದಂಪತಿ ಮೇಲೆ ಹಲ್ಲೆ: ಬಿಜೆಪಿ ಮುಖಂಡ ವಿರುದ್ದ ಎಫ್ಐಆರ್

Share this with Friends

ಅಥಣಿ: ಬಿಜೆಪಿ ಮುಖಂಡನಿಂದ ಮುಸ್ಲಿಂ ದಂಪತಿ ಹಲ್ಲೆ ಮಾಡಿದ ಘಟನೆ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ. ಬಿಜೆಪಿ ಮುಖಂಡ ಬಾಬಾಸಾಹೇಬ್ ದೊಂಡಿರಾಮ್ ಎಂಬ ವ್ಯಕ್ತಿ ಮಹಮ್ಮದ ದಾವಲ್ ವಜ್ರವಾಡೆ ಹಾಗೂ ರಮೀಜಾ ಮಹಮ್ಮದ ವಜ್ರವಾಡೆ ದಂಪತಿ ಮೇಲೆ ಹಲ್ಲೆ‌ ಮಾಡಿದ್ದಾರೆ ಎಂದು ಆರೋಪ ಕೇಳಿ‌ಬಂದಿದೆ

ಲೋಕಸಭಾ ಚುನಾವಣೆ ಮತದಾನ ಮಾಡುವ ಸಮಯದಲ್ಲಿ ಚುನಾವಣಾ ಮತಗಟ್ಟೆಯಿಂದ ಎಳೆದು ತಂದು ತನ್ನ ಸ್ವಂತ ಹಾಲಿನ ಡೈರಿಯ ಮುಂದೆ ಮಹಮ್ಮದ ದಾವಲ್ ವಜ್ರವಾಡೆ ಮೇಲೆ ಬಿಜೆಪಿ ಮುಖಂಡ ಹಲ್ಲೆ‌ ನಡೆಸಿದ್ದು, ಮಧ್ಯದಲ್ಲಿ ಜಗಳ ಬಿಡಿಸಲು ಹೋದ ಪತ್ನಿ ರಮೀಜಾ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಇದೀಗ ಹಲ್ಲೆಗೊಳಗಾದ ಮಹಮ್ಮದ ದಾವಲ್ ವಜ್ರವಾಡೆ ಸಾರ್ವಜನಿಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಬಾಬಾಸಾಬ ದೊಂಡಿರಾಮ್ ಶಿಂಧೆ ಸೇರಿ ಎಂಟು ಜನರ ವಿರುದ್ಧ ಹಲ್ಲೆ ಆರೋಪದಡಿ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.


Share this with Friends

Related Post