Mon. Dec 23rd, 2024

ಕನ್ನ ಕೊರೆದು ಬ್ಯಾಂಕ್ ದರೋಡೆಗೆ ಯತ್ನ

Share this with Friends

ಟಿ.ನರಸೀಪುರ,ಮಾ.7: ಬ್ಯಾಂಕ್ ಶೌಚಾಲಯದ ಗೋಡೆಗೆ ಕನ್ನ ಕೊರೆದು ದರೋಡೆಗೆ ಯತ್ನಿಸಿದ ಘಟನೆ ಎಸ್ ಬಿ ಐ ನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ದೊಡ್ಡೇಬಾಗಿಲು ಗ್ರಾಮದಲ್ಲಿರುವ ಎಸ್ ಬಿ‌ ಐ ಬ್ಯಾಂಕ್ ಗೆ ಖದೀಮರು ಕನ್ನ ಕೊರೆದು ಏನನ್ನೂ ದೋಚಲಾಗದೆ ಹಿಂದಿರುಗಿದ್ದಾರೆ.

ಬ್ಯಾಂಕ್ ನ ಶೌಚಾಲಯದ ಗೋಡೆಗೆ ಕನ್ನ ಹಾಕಿ ಒಳ ಪ್ರವೇಶಿಸಿರುವ ಖದೀಮರು ಸಿಸಿ ಕ್ಯಾಮರಾ ಹಾನಿಗೊಳಿಸಿ ಲಾಕರ್ ತೆರೆಯಲು ಯತ್ನಿಸಿ ವಿಫಲರಾಗಿ ಬರಿಗೈಲಿ ಹೋಗಿದ್ದಾರೆ.

ಎಸ್ ಬಿ ಐ ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಾಬು ಅವರು ಭೇಟಿ ನೀಡಿ ಪರಿಶೀಲಿಸಿದರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬ್ಯಾಂಕ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಚಲನವಲನ ಸೆರೆಯಾಗಿದೆ,ಟಿ.ನರಸೀಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share this with Friends

Related Post