ಬೆಂಗಳೂರು : “ನೆನಪಿನ ಬದುಕು ನನ್ನಪ್ಪ” ಕವನ ಸಂಕಲನವು ನಾಡಿನ ಜನರ ನಿದ್ದೆ ಕೆಡೆಸುವ ಸತ್ಯವನ್ನು ಈ ಸಮಾಜದ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ಹೆಣ್ಣಿನ ಶೋಷಣೆ ಸಾನಾತನ ಕಾಲದಿಂದಲೂ ಇಲ್ಲಿಯವರಿಗೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತ ಬಂದಿದೆ ಎಂದು ತಿಳಿಸುತ್ತದೆ
ಹೆಣ್ಣಿನ ಶೋಷಣೆಯ ವಿರುದ್ಧ ಬುದ್ಧ,ಸಾವಿತ್ರಿಬಾಯಿ ಫುಲೆ, ಜ್ಯೋತಿ ಬಾ ಫುಲೆ, ಬಸವಣ್ಣ,ಅಂಬೇಡ್ಕರ್, ಅಕ್ಕಮಹಾದೇವಿ, ಅನಿಬೆಸೆಂಟ್, ಮದರ್ ತೆರೆಸಾ, ವಿನೋಬಾ ಬಿಹೇವ್, ಸರೋಜಿನಿ ನಾಯ್ಡು, ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಂ ಮೋಹನ್ ರಾಯ್ ಈಗೇ ಅನೇಕರು ವಿವಿಧ ರೀತಿಯಲ್ಲಿ ಹೋರಾಟ ಮಾಡಿದರು ಸಹ ಹೆಣ್ಣಿನ ಮೇಲಿನ ಶೋಷಣೆ ಇನ್ನೂ ಜೀವಂತವಾಗಿದೆ ಎಂದು ಲೇಖಕಿ ಸುಮಲತಾ ಅವರು ನೆನೆಪಿನ ಬದುಕು ನನ್ನಪ್ಪ ಪುಸ್ತಕದ ಮೂಲಕ
ಸಮಾಜದ ಜನರಿಗೆ ಉತ್ತಮ ಸಂದೇಶ ನೀಡಿದ್ದಾರೆ.
ಲೇಖಕಿ ಸುಮಲತಾ ರವರ “ನೆನಪಿನ ಬದುಕು ನನ್ನಪ್ಪ” ಪುಸ್ತಕದಲ್ಲಿ 69 ಕವನಗಳಿದ್ದು ಒಂದಕ್ಕಿಂತ ಒಂದು
ವಿಭಿನ್ನತೆಯಿಂದ ಕೂಡಿದ್ದು ಹೆಣ್ಣಿನ ಮನದಾಳದ ಉತ್ತರವೇ ದೊರಕದ ಹಲವಾರು ಗೌಪ್ಯತೆಯ ಪ್ರಶ್ನೆಗಳನ್ನು ಹೊರಹಾಕಿದ್ದು ಮನೋಜ್ಞವಾಗಿ ಮೂಡಿಬಂದಿದೆ ಹೆಣ್ಣು ಮಕ್ಕಳು ತಮ್ಮೆಲ್ಲ ಸಂಸಾರ ಹಾಗೂ ಒತ್ತಡದ ನಡುವೆಯೋ ಹೆಣ್ಣು ಈ ಸಮಾಜದ ಎಲ್ಲಾ ರಂಗಗಳಲ್ಲೂ ಗಂಡಸಿಗೆ ಸರಿಸಮನಾಗಿ ನಿಲ್ಲುವ ಶಕ್ತಿಯನ್ನು ತುಂಬಾ ವಿಸ್ತಾರವಾಗಿ ತಿಳಿಸಿದ್ದಾರೆ
ಹೆಣ್ಣು ಎಲ್ಲಾ ರಂಗಗಳಲ್ಲೂ ತನ್ನ ಪ್ರತಿಭೆಯನ್ನು ತೋರಿಸಿದರು ಹೆಣ್ಣಿನ ಮೇಲೆ ದೌರ್ಜನ್ಯ, ದಬ್ಬಾಳಿಕೆ ಈ ಪುರುಷ ಪ್ರಧಾನ ಸಮಾಜದಲ್ಲಿ ನಡೆಯುತ್ತಲೆ ಇದೆ ಯಾಕೆ ಎಂದು ಕೇಳುವ ಲೇಖಕಿಯ ಪ್ರಶ್ನೆಗೆ ಈ ಸಮಾಜ ಹಾಗೂ ಸರ್ಕಾರ ಉತ್ತರವನ್ನು ಹುಡುಕುವಂತಾಗಿದೆ
ಸನಾತನ ಕಾಲದ ಮನುಧರ್ಮ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯ ಕೊಡದೇ ನಾಲ್ಕು ಗೋಡೆಗಳ ಮಧ್ಯೆ ಕೂಡು ಹಾಕಿ ಮಕ್ಕಳನ್ನು ಹೆರುವ ಯಂತ್ರವಾಗಿ ಮಾಡಿಕೊಂಡಿತು ಬಾಲ್ಯವಿವಾಹ, ಸತೀಪದ್ದತಿ, ದೇವದಾಸಿ ಪದ್ಧತಿ, ವರದಕ್ಷಿಣೆ ಕಿರುಕುಳ , ಆಗೇ ಅನೇಕ ಅನಿಷ್ಟ ಪದ್ಧತಿಗಳನ್ನು ಹಾಗೂ ಮೂಢನಂಬಿಕೆಗಳನ್ನು ಮಹಿಳೆಯರ ಮೇಲೆ ಒತ್ತಾಯಪೂರ್ವಕವಾಗಿ ಹೇರಿ ಎರಡು ನಿಮಿಷದ ದೇಹ ಸುಖಕ್ಕಾಗಿ ಅಮಾನುಷವಾಗಿ ನಡೆದುಕೊಂಡು ತೀಟೆ ತೀರಿದ ನಂತರ ಆಕೆಯ ನೊವುಗಳಿಗೆ ಸ್ಪಂದಿಸದೇ ಆಕೆಯನ್ನು ಹೀನವಾಗಿ ನಡೆಸುಕೊಂಡು ಬಂದಿರುವುದನ್ನು ತಮ್ಮ ಕವನಗಳ ಮೂಲಕ ತಿಳಿಸಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಿಳೆ ಪರವಾಗಿ ತಂದಂತಹ ಹಿಂದೂ ಕೋಡ್ ಬಿಲ್ ಅನ್ನು ಸ್ತ್ರೀ ವಿರೋಧಿ ಕಾಂಗ್ರೆಸ್ ನ ನೆಹರೂ ಸರಕಾರ ಜಾರಿಗೆ ತರಲಿಲ್ಲ ಆದ ಕಾರಣ ಮಹಿಳೆಯರ ಪ್ರಗತಿ ಇನ್ನೂ ಕುಂಠಿತವಾಗಿ ಸಾಗುತ್ತಿದೆ. ಒಂದು ಸಮಾಜದ ಪ್ರಗತಿಯನ್ನು ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ ಎಂದು ಮಹಿಳಾ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಮಹಿಳೆಯರಿಗೆ ಪುರುಷರಂತೆ ಸಮಾನ ಅವಕಾಶ ಕಲ್ಪಿಸಿಕೊಟ್ಟ ಸಂವಿಧಾನವನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರುವಲ್ಲಿ ಇಲ್ಲಿಯವರೆಗೂ ಅಧಿಕಾರ ಮಾಡಿದ ಸರ್ಕಾರಗಳು ವಿಫಲವಾಗಿವೆ ಎಂದು ತಮ್ಮ ಕವನಗಳ ಮೂಲಕ ಲೇಖಕಿ ಸುಮಲತಾ ತಿಳಿಸಿರುವುದು ಇಡೀ ಭಾರತ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ .
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಪರಿಚಿತನ ಮೂರು ಗಂಟಿಗೆ ಕೊರ ಳೊಡ್ಡಿ ಹೊಸ ಊರು ಜಾಗ ಜನಕ್ಕೆ ಹೊಂದಿಕೊಂಡು ಅಪ್ಪ ನನ್ನ ಹೆಸರು ಮುಂದಿರುವ ನಿನ್ನ ಹೆಸರು ತೆಗೆಯಬೇಕಂತೆ ಮುಟ್ಟಿನ ಕಾರಣ ತಿಂಗಳಿಗೆ ಮೂರು ದಿನ ಸೂತಕ ಎಂದು ನನ್ನ ಮನೆಯಿಂದ ಹೊರ ಇಡುತ್ತಾರೆ ಮುಟ್ಟಿನಿಂದ ಮಕ್ಕಳು ಮಾಡಿ ಮುಟ್ಟನ್ನೆ ಸೂತಕ ಎನ್ನುತ್ತಾರೆ ಮಗು ಹುಟ್ಟಿದ ನಂತರ ನನ್ನ ಮನೆಯಿಂದ ಸೂತಕ ಕಳೆಯವರಿಗೂ ಹೊರ ಇಡುತ್ತಾರೆ ನಾನು ವಿಧುವೆಯಾದರೆ ಯಾವುದೇ ಶುಭ ಕಾರ್ಯಕ್ಕೆ ಹೋದರೆ ಅಪ ಶಕುನ ಎನ್ನುತ್ತಾರೆ ಹೆಂಡತಿ ಸತ್ತರೆ ಗಂಡ ಮೂರು ತಿಂಗಳಲ್ಲಿ ಮದುವೆಯಾದರೆ ಶುಭ ಶಕುನ ಎನ್ನುತ್ತಾರೆ ಗಂಡ ಸತ್ತ ಮಹಿಳೆ ಇನ್ನೂಂದು ಮದುವೆಯಾಗಲು ಅಶುಭ ಶಕುನ ಎನ್ನುತ್ತಾರೆ ಅಪ್ಪ ನಾ ಹೆಣ್ಣಾಗಿ ಹುಟ್ಟಿರುವುದೇ ತಪ್ಪಾ ಎಂದು ಕೇಳುವ ಪ್ರಶ್ನೆಗಳಿಗೆ ಉತ್ತರವೇ ಇಲ್ಲದಂತಾಗಿದೆ