Fri. Mar 6th, 2026

ಲಯನ್ಸ್ ಅಂತರಾಷ್ಟ್ರೀಯ ಅಂಬಾಸಿಡರ್ಸ್ ಸಂಸ್ಥೆಯಿಂದ ಕಾರ್ಮಿಕರಿಗೆ ಸನ್ಮಾನ

Share this with Friends

ಮೈಸೂರು, ಜೂನ್.1: ಮೈಸೂರಿನ ಲಯನ್ಸ್ ಅಂತರಾಷ್ಟ್ರೀಯ ಅಂಬಾಸಿಡರ್ಸ್ ಸಂಸ್ಥೆಯು ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಿತು.

ಮಕಾಳಾ ಮಾತೃ ಸಂಸ್ಥೆಯಾದ ಶಿಲ್ಪ ಎಂಟರ್‌ಪ್ರೈಸಸ್ ನಲ್ಲಿ ಡಿಸೇಲ್ ಇಂಜಿನ್ ಮತ್ತು ಜನರೇಟರ್ ಮ್ಯಾಕಾನಿಕ್ ಆಗಿ 25 ವರುಷದಿಂದ ನಿರಂತರವಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶ್ರೀ ಸಿದ್ಧರಾಜು ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹೆಚ್. ಸಿ.ಕಾಂತರಾಜು, ಜಿಲ್ಲಾ ಸಂಪುಟ ಕಾರ್ಯದರ್ಶಿ ಟಿ.ಹೆಚ್.ವೆಂಕಟೇಶ್ , ಎಮ್ . ಶಿವಕುಮಾರ್ , ಕಾರ್ಯದರ್ಶಿ ಸಿ .ಆರ್ .ದಿನೇಶ್, ಖಜಾಂಚಿ ಕೆ.ಟಿ ವಿಷ್ಣು , ವಲಯ ಅಧ್ಯಕ್ಷ ಕೆ. ಆರ್ ಭಾಸ್ಕರಾನಂದ ಪಾಲ್ಗೊಂಡಿದ್ದರು.


Share this with Friends

Related Post