Wed. Dec 25th, 2024

ವಧು-ವರರಿಂದ ಮತದಾನದ ಅರಿವು

Share this with Friends

ಮೈಸೂರು, ಏ.23: ನಂಜನಗೂಡು ವಿವಾಹ ಸಂಭ್ರಮದಲ್ಲಿದ್ದ ನವ ವಧು ವರ ಕೂಡಾ ಮತದಾನ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಂಜನಗೂಡಿನ ಅಂಬೇಡ್ಕರ್ ಭವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ ಹೆಬ್ಯಾ ಗ್ರಾಮದ ತುಳಸಿ ಹಾಗೂ ಸೋಮೇಶ್ವರಪುರ ಗ್ರಾಮದ ಗಿರೀಶ್ ಘೋಷವಾಕ್ಯ ಫಲಕ ಹಿಡಿದು ಮತದಾರರ ಫೋಟೋ ಫ್ರೇಮ್‌ನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ಮೂಲಕ ‘ಏಪ್ರಿಲ್ 26 ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂಬ ಸಂದೇಶ ಸಾರಿದರು.

ಈ ವಿಶೇಷ ಕ್ಷಣಕ್ಕೆ ವಧು-ವರರ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು.
ಸ್ವೀಪ್ ಸಮಿತಿಯ ವಿಭಿನ್ನ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಯಿತು.

ಈ‌ ವೇಳೆ ತಾಲ್ಲೂಕು ಸ್ವೀಪ್ ಸಮಿತಿಯ ದಿನೇಶ್, ಕಾವ್ಯ, ಗುರುಸಿದ್ದಯ್ಯ, ನವೀನ್ ಹಾಜರಿದ್ದರು.


Share this with Friends

Related Post