Tue. Dec 24th, 2024

ವಿವಾಹದ ಮಂಟಪದಲ್ಲೂ ಮತದಾನದ ಅರಿವು

Share this with Friends

ಚಾಮರಾಜನಗರ,ಮಾ.28: ಚಾಮರಾಜ ನಗರದಲ್ಲಿ ವಿವಾಹದ ಮಂಟಪದಲ್ಲೂ ಮತದಾನದ ಅರಿವು ಮೂಡಿಸಿದುದು ವಿಶೇಷವಾಗಿತ್ತು

ಚಾಮರಾಜನಗರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಮಾಂಗಲ್ಯಂ ಕಲ್ಯಾಣ ಮಂಟಪದಲ್ಲಿಂದು ನಡೆದ ಮದುವೆ ಸಮಾರಂಭದಲ್ಲಿ ನೂತನ ವಧು-ವರರು ಹಾಗೂ ನೆರೆದಿದ್ದ ಸಾವಿರಾರು ಜನರಿಗೆ ಲೋಕಸಭಾ ಚುನಾವಣಾ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿವಾಹ ದಂಪತಿಗಳಿಗೆ ನಮ್ಮ ಮತ ನಮ್ಮ ಹಕ್ಕು ಬಿತ್ತಿ ಪತ್ರಹಿಡಿಸಿ ಮತದಾನದ ಅರಿವು ಮೂಡಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಪಿ. ಲಕ್ಷ್ಮೀ ಅವರ ನೇತೃತ್ವದಲ್ಲಿ ಕಡ್ಡಾಯ ಮತದಾನದ ಕುರಿತು ಜಾಗೃತಿ ನಡೆಯಿತು.


Share this with Friends

Related Post