Wed. Dec 25th, 2024

ಸಾಧಕರಿಗೆ ಬಸವ‌ ಕಾಯಕ ಪ್ರಶಸ್ತಿ ಪ್ರದಾನ

Share this with Friends

ಬೆಂಗಳೂರು, ಮೇ.25: ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ಸೇನಾ ಪಡೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಮಾಜಿ ಸಚಿವರಾದ ಅಡಗೂರು ಹೆಚ್ ವಿಶ್ವನಾಥ್ ಅವರು ವಿವಿಧ ಕ್ಷೇತ್ರಗಳ ಸಾಧಕರಿಗೆ ಬಸವ ಕಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಈ ವೇಳೆ ಮಾತನಾಡಿದ ಹೆಚ್ ವಿಶ್ವನಾಥ್, ಬಸವಣ್ಣನವರು ಹನ್ನೆರಡನೇ‌ ಶತಮಾನದಲ್ಲಿಯೇ ಕ್ರಾಂತಿ ಮಾಡಿದ್ದರು,ಮೇಲು,ಕೀಳು,ಜಾತಿ,ಧರ್ಮ ಎಂಬ ಬೇದ ಮಾಡಬಾರದು ಕಾಯಕ ಮಾಡುವವರೆಲ್ಲಾ ಶ್ರೀಮಂತರೇ ಎಂದು ‌ಹೇಳಿದ್ದರು,ಸಕಲರನ್ನೂ‌ ಆರಾಧಿಸಿದರು.ನಾವೆಲ್ಲಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಬಸವಣ್ಣನವರು ಕೇವಲ ಒಂದು ಜಾತಿ,ಧರ್ಮಕ್ಕೆ ಸೀಮಿತರಲ್ಲ,ಅವರು ವಿಶ್ವಗುರು ಸರ್ವ ಜನಾಂಗದವರು ಎಂದು ಬಣ್ಣಿಸಿದರು.

ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಸ್ವಾಗತಿಸಿದರು ಹಾಗೂ ಮೂಗೂರು ನಂಜುಂಡಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಡಾ ಬಿ ಆರ್ ನಟರಾಜ್ ಜೋಯ್ಸ,
ವರುಣಾ ಮಹೇಶ್,
ರವಿಕುಮಾರ್ ಎಸ್ ಆರ್,
ರಾಮಚಂದ್ರು ರವರಿಗೆ ಬಸವ ಕಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Share this with Friends

Related Post