Tue. Dec 24th, 2024

ಬಸವಣ್ಣನವರು ಹಾಕಿಕೊಟ್ಟ ದಾರಿ­ಯಲ್ಲಿ ಮುನ್ನಡೆ­ಯಬೇಕು : ಎಂ ಕೆ ಸೋಮಶೇಖರ್

Share this with Friends

ಮೈಸೂರು,ಮೇ.10:ಬಸವೇಶ್ವರರ
ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಬಸವ ಜಯಂತಿ ಅರ್ಥಪೂರ್ಣವೆನಿಸುತ್ತದೆ ಎಂದು ಮಾಜಿ ಶಾಸಕ ಎಂ ಕೆ ಸೋಮಶೇಖರ್ ಹೇಳಿದರು.

ನಗರದ ಕನಕಗಿರಿಯ ಸುಯೆಜ್ ಫಾರಂ ಮುಂಭಾಗ ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ವತಿಯಿಂದ‌ ಏರ್ಪಡಿಸಿದ್ದ ಕಾಯಕಯೋಗಿ ಶ್ರೀ ಬಸವೇಶ್ವರ ಜಯಂತಿ ವೇಳೆ ಗೋಪೂಜೆ ಮಾಡಿ ಮೇವು ವಿತರಿಸಿ
ಅವರು ಮಾತನಾಡಿದರು.

ಜಾತ್ಯತೀತ ಸಮಾಜ ನಿರ್ಮಾಣದ ತತ್ವದಲ್ಲಿ ಬಸವಣ್ಣ­ನವರು ಸಾಮಾಜಿಕ ಕ್ರಾಂತಿ ಮಾಡಿದ್ದರು,ಸಮಾಜದ ಅಭಿ­ವೃದ್ಧಿಗಾಗಿ ಹೋರಾಡಿದ್ದರು, ಸಮಾಜ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದು ‌ತಿಳಿಸಿದರು.

ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಡಾಕ್ಟರ್ ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷ ಗೌರಿಶಂಕರ ನಗರದ ಶಿವಕುಮಾರ್, ಕಂಸಾಳೆ ರವಿ , ವಿಶ್ವ ,ಎಸ್ ಎನ್ ರಾಜೇಶ್,ಸಿದ್ದರಾಮ, ಲೋಕೇಶ್, ಮಂಜು, ಕುಮಾರ್, ಮಂಜುನಾಥ್ ,ಕೇಬಲ್ ಮಹಾದೇವ್ ಮತ್ತಿತರರು ಹಾಜರಿದ್ದರು.


Share this with Friends

Related Post