Fri. Mar 6th, 2026

ಫಾಸ್ಟ್ ಫುಡ್,ಮಂಚೂರಿ ತಿನ್ನುವ ಮುನ್ನ ಎಚ್ಚರಿಕೆ ವಹಿಸಿ: ದಿನೇಶ್ ಗುಂಡೂರಾವ್

Share this with Friends

ಬೆಂಗಳೂರು:ಮನೆಯಿಂದ ಹೊರಗಡೆ ಆಹಾರ ಸೇವಿಸುವಾಗ, ವಿಶೇಷವಾಗಿ ಫಾಸ್ಟ್‌ಫುಡ್‌ಗಳನ್ನು ಆರ್ಡರ್ ಮಾಡುವ ಮುನ್ನ ಅದರಲ್ಲಿ ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ನಿರ್ಲಕ್ಷ್ಯ ಮಾಡಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಂತಹ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಹಾನಿಕಾರಕ ‘ಕೃತಕ ಬಣ್ಣಗಳ’ (Food Color) ಬಳಕೆಯನ್ನು ಸರ್ಕಾರ ಈಗಾಗಲೇ ಅಧಿಕೃತವಾಗಿ ನಿಷೇಧಿಸಿದೆ. ಈ ಬಗ್ಗೆ ವ್ಯಾಪಕ ಅರಿವು ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತಿದೆ.ಆದರೂಈ ಆಹಾರ ಸೇವನೆ ಮಾಡುವವರೂ ಸಹ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಹೋಟೆಲ್‌ಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಡೆಗಟ್ಟಲು, ಅಂತಹ ಎಣ್ಣೆಯನ್ನು ಸಂಗ್ರಹಿಸಿ ‘ಬಯೋ ಡೀಸೆಲ್’ ಆಗಿ ಪರಿವರ್ತಿಸುವ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಗಳ (NGO’s) ಸಹಯೋಗದೊಂದಿಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಇದರಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ,ಮರು ಬಳಕೆ ಅಡುಗೆ ಎಣ್ಣೆ ಕುರಿತ ಮಾಹಿತಿಯನ್ನು ಇಲಾಖೆಗೆ ತಿಳಿಸಿದರೆ ಅಗತ್ಯ ಕ್ರಮಕ್ಕೆ ಸಹಕಾರಿಯಾಗಲಿದೆ ಎಂದರು.

ಮನೆಯಿಂದ ಹೊರಗಡೆ ಆಹಾರ ಸೇವಿಸುವಾಗ, ವಿಶೇಷವಾಗಿ ಫಾಸ್ಟ್‌ಫುಡ್‌ಗಳನ್ನು ಆರ್ಡರ್ ಮಾಡುವ ಮುನ್ನ ಅದರಲ್ಲಿ ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ನಿರ್ಲಕ್ಷ್ಯ ಮಾಡಬೇಡಬಾರದು. ಇಷ್ಟೆಲ್ಲಾ ಕಟ್ಟುನಿಟ್ಟಿನ ಸೂಚನೆಗಳಿದ್ದರೂ ಸಹ, ಯಾವುದಾದರೂ ಹೋಟೆಲ್ ಅಥವಾ ಫಾಸ್ಟ್‌ಫುಡ್ ಮಳಿಗೆಗಳಲ್ಲಿ ನಿಷೇಧಿತ ಬಣ್ಣಗಳನ್ನು ಬಳಸುತ್ತಿರುವುದು ಕಂಡುಬಂದಲ್ಲಿ ದಯವಿಟ್ಟು ರಾಜಿ ಮಾಡಿಕೊಳ್ಳಬೇಡಿ. ತಕ್ಷಣವೇ ಹತ್ತಿರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಅಥವಾ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಬೇಕು. ರಾಜ್ಯದ ಜನರ ಆರೋಗ್ಯ ಸುರಕ್ಷತೆ ನಮ್ಮ ಮೊದಲ ಆದ್ಯತೆ ಹಾಗಾಗಿ ಜಾಗೃತರಾಗಿರಿ, ಸುರಕ್ಷಿತವಾಗಿರಿ ಎಂದು ತಿಳಿಸಿದರು.


Share this with Friends

Related Post