ಹಾವೇರಿ: ಬೆಡ್ತಿ ವರದಾ ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ ಇದು ಅಂತಾರಾಜ್ಯ ನದಿ ಸಮಸ್ಯೆಯಾಗುವುದಿಲ್ಲ,ಈ ಯೋಜನೆ ನಮ್ಮ ಬದುಕಿನ ಪ್ರಶ್ನೆ, ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ. ಯಾರ ವಿರುದ್ದವೂ ನಮ್ಮ ಹೋರಾಟವಲ್ಲ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿಯ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ – ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಂಧ್ರದ ಪಾಲು ಆಂಧ್ರಕ್ಕೆ ನಮ್ಮ ಪಾಲು ನಮಗೆ ಅಂತ ಕೊಟ್ಡಿದ್ದಾರೆ. ನದಿ ತುಂಬಿ ಹರಿಯುವಾಗ ಒಂದು ಕೊಡಪಾನ ನೀರು ತೆಗೆದುಕೊಂಡರೆ ಏನು ಅಗುವುದಿಲ್ಲ ನಾವು ಕೇಳಿದ್ದು ಬದುಕಲು. ಎರಡು ಕಡೆಯಿಂದ ನೀರು ತೆಗೆದಾಗ ಡ್ಯಾಮ್ ಬದಲು ಬ್ಯಾರೆಜ್ ಕಟ್ಟುತ್ತೇವೆ. ನದಿ ಪಾತ್ರದ ಹೊರಗಡೆಯಿಂದ ನದಿ ನೀರನ್ನು ಲಿಪ್ಟ್ ಮಾಡುವ ವ್ಯವಸ್ಥೆ ಮಾಡುತ್ತೇವೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದರು.
ಈಗಾಗಲೇ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿದೆ. ಈಗ ಡಿಪಿಆರ್ ಮಾಡಲು ಎಂಒಯು ಸೈನ್ ಆಗಿದೆ. ಅವರು ವಿರೋಧ ಮಾಡುತ್ತಾರೆಂದು ನಾವು ವಿರೋಧ ಮಾಡುತ್ತಿಲ್ಲ ಇದು ನಮ್ಮ ಬದುಕಿನ ಪ್ರಶ್ನೆ ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ ನಮ್ಮ ಬದುಕಿಗಾಗಿ ಹೋರಾಟ. ಸುಮಾರು ಇಪ್ಪತೈದು ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಅವರ ವಿರುದ್ದ ಅಲ್ಲ.ಡಿಪಿಆರ್ ಆಗುವುದರೊಳಗೆ ಹೆಚ್ಚು ಜನರ ಜಾಗೃತಿ ಮಾಡಲು ಸಾಧ್ಯ ವಿದೆಯೊ ಅಷ್ಟು ಜಾಗೃತಿ ಮಾಡಬೆಕು. ಎಚ್ಚರಿಕೆ ವಹಿಸಿ ನಮ್ಮ ಜಿಲ್ಲೆಗೆ ಎಷ್ಟು ನೀರು ಬರಬೇಕು ಎನ್ನುವುದನ್ನು ಪಡೆಯಬೇಕು, ಆಗ ಮಾತ್ರ ನಮಗೆ ಶಾಶ್ವತ ನ್ಯಾಯ ಸಿಗುತ್ತದೆ ಎಂದರು.
ಇದು ಸುದೀರ್ಘ ಹೋರಾಟ ಬೇಸರ ಮಾಡಕೊಂಡರೆ ಕೆಲಸ ಆಗುವುದಿಲ್ಲ. ಇದರಲ್ಲಿ ರಾಜಕಾರಣ ಇಲ್ಲ. ಎಲ್ಲರೂ ಸೇರಿ ಪ್ರಯತ್ನ ಮಾಡೋಣ. ನಾವೂ ಕೂಡ ತಜ್ಞರನ್ನು ನೇಮಿಸೋಣ ಸುದೀರ್ಘ ಹೋರಾಟಕ್ಕೆ ಸಿದ್ದತೆ ಮಾಡೋಣ ಪ್ರಯತ್ನ ಮಾಡುವ ಸಂದರ್ಭದಲ್ಲಿ ಹೆಚ್ಚು ಕಡಿಮೆಯಾದರೆ ಸಮಸ್ಯೆಮೆಯಾಗುತ್ತದೆ. ಆ ಭಾಗದ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡೋಣ ನಮ್ಮ ತೀರ್ಮಾನ ತರ್ಕಬದ್ದವಾಗಿರಬೇಕು. ನಾವು ತರ್ಕಬದ್ದವಾಗಿ ಮಾಡಿದರೆ ಜಯ ಸಿಗುತ್ತದೆ. ಇದು ಜನ ಶಕ್ತಿಯ ಮೊದಲ ಹೆಜ್ಜೆ ಬರುವ ದಿನಗಳಲ್ಲಿ ಜನ ಜಾಗೃತಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲೆಯ ಹಲವಾರು ಪರಮಪೂಜ್ಯರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಹಾಗೂ ರೈತ ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

