Thu. Dec 26th, 2024

ಮೈಸೂರಿನಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ:ಯದುವೀರ್ ಒಲವು

Share this with Friends

ಮೈಸೂರು, ಏ.6: ಮೈಸೂರಿನಲ್ಲಿ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಖಾಸಗಿ ಹೋಟೆಲಿನಲ್ಲಿ ಬಿಜೆಪಿ ಮೈಸೂರು ನಗರ ಜಿಲ್ಲಾ ರಾಜ್ಯ ವೈದ್ಯಕೀಯ ಪ್ರಕೋಸ್ಟ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೈದ್ಯರ ಸಭೆಯಲ್ಲಿ ‌ಯದುವೀರ್ ಮಾತನಾಡಿದರು.

ಮೈಸೂರು ಅರಸರು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿರುವಂತದ್ದು, ಮೈಸೂರು ಸಂಸ್ಥಾನ ಆರೋಗ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ ಬೆಂಗಳೂರಿನಲ್ಲಿ ಮಿಂಟೊ ಆಸ್ಪತ್ರೆ, ಮೈಸೂರಿನಲ್ಲಿ ಕೆಆರ್ ಆಸ್ಪತ್ರೆ ಹೀಗೆ ಹಲವಾರು ಆರೋಗ್ಯ ಕೇಂದ್ರಗಳ ಉದಾಹರಣೆಯನ್ನು ಅವರು ನೀಡಿದರು.

ಮೈಸೂರು ಸಂಸ್ಥಾನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಪ್ರಪಂಚದಲ್ಲೇ ಮೈಸೂರು ಮೂರು ನಾಲ್ಕನೇ ಸ್ಥಾನದಲ್ಲಿತ್ತು, ಬ್ರಿಟನ್, ಜರ್ಮನಿಗಿಂತಲೂ ಉತ್ತಮವಾದ ಆರೋಗ್ಯ ಸೇವೆ ಮೈಸೂರಿನಲ್ಲಿ ಸಿಗುತ್ತಿತ್ತು ಬಹಳಷ್ಟು ಆರೋಗ್ಯ ಸೇವೆಗೆ ವಿದೇಶಗಳಿಂದ ಜನರು ಇಲ್ಲಿಗೆ ಬರುತ್ತಿದ್ದರು ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯವಂತ ಸಮಾಜಕ್ಕಾಗಿ ಹೆಚ್ಚು ಒತ್ತು ನೀಡಿದ್ದಾರೆ ಅದೇ ರೀತಿ ಅವರು ಯೋಗಕ್ಕೂ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದಾರೆ ಇದು ಮಾದರಿಯಾಗಿದ್ದು ನಾವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ಮತ್ತು ಮೈಸೂರು-ಕೊಡಗು ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಬೇಕು ಇಲ್ಲಿಗೆ ಅತ್ಯುತ್ತಮ ಹೆಲ್ತ್ ಕೇರ್ ಸೆಂಟರ್ ಆಗಲೇ ಬೇಕಿದೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅಗತ್ಯ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಲ್ಲಿ ಯದುವೀರ್ ಮನವಿ ಮಾಡಿದರು.

ಬಿಜೆಪಿ ನಗರಾಧ್ಯಕ್ಷ ಎಲ್ ನಾಗೇಂದ್ರ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನಾನು ಮೈಸೂರಿಗೆ ಬಹಳಷ್ಟು ಹಣವನ್ನು ಬಿಡುಗಡೆ ಮಾಡಿಸಿದ್ದೆ ಎಂದು ತಿಳಿಸಿದರು.

89 ಕೋಟಿ 95 ಲಕ್ಷ ರು ವೆಚ್ಚದಲ್ಲಿ ಕೆ ಆರ್ ಎಸ್ ರಸ್ತೆ ರಿಪೇರಿ ಮತ್ತು ನವೀಕರಣಕ್ಕೆ ಬಿಡುಗಡೆ ಮಾಡಿಸಿದೆ, ಅದೇ ರೀತಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಮತ್ತು ಹೆಣ್ಣು ಮಕ್ಕಳಿಗೂ ವಿದ್ಯಾರ್ಥಿನಿಲಯವನ್ನು ಮಾಡಿಸಿಕೊಟ್ಟಿದ್ದೆ ಹೀಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮೈಸೂರಿಗೆ ಬಹಳಷ್ಟು ಕೊಡುಗೆಗಳನ್ನು ಕೊಡಲಾಗಿದೆ ಎಂದು ಸ್ಮರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆಯನ್ನು ಇಡೀ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ, ಕೋಟ್ಯಾಂತರ ಜನರಿಗೆ ಇದರಿಂದ ಒಳಿತಾಗಿದೆ. ಅದೇ ರೀತಿ ನಮ್ಮ ಮೈಸೂರು ಮಹಾರಾಜರು ಕೊಟ್ಟಿರುವ ಕೊಡುಗೆಗಳು ಅಪಾರ ಎಂದು ಸ್ಮರಿಸಿದರು.

ಉದಾಹರಣೆಗೆ 200 ಎಕರೆ ಜಾಗವನ್ನು ಕೊಟ್ಟು ಕೆಆರ್ ಆಸ್ಪತ್ರೆ ನಿರ್ಮಿಸಲು ಕಾರಣರಾದರು, ಹಾಗೆಯೇ ಮಾನಸ ಗಂಗೋತ್ರಿಗೂ ಮಹಾರಾಜರು ಜಾಗ ಕೊಟ್ಟಿದಾರೆ ಅವರ ಕೊಡುಗೆಗಳು ಅಪಾರ ಎಂದು ತಿಳಿಸಿದರು.

ಇದೀಗ ನಮ್ಮ ಮಹಾರಾಜ ಯದುವೀರ್ ಅವರು ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಅವರನ್ನು ನೀವೆಲ್ಲರೂ ಬೆಂಬಲಿಸಿ ಗೆಲ್ಲಿಸಬೇಕು ಎಂದು ವೈದ್ಯರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಡಾ ಸದಾನಂದ, ಡಾಕ್ಟರ್ ರವೀಂದ್ರನಾಥ್, ಎನ್ ವಿ ಪನೀಶ್, ಮೈಸೂರು ವಿಭಾಗ ಪ್ರಭಾರಿ ವೈ ವಿ ರವಿಶಂಕರ್, ವೈದ್ಯಕೀಯ ಪ್ರಕೋಸ್ಟ ಮುಖ್ಯ ಸಂಚಾಲಕರಾದ ಗಿರೀಶ್,
ವೈದ್ಯ ಡಾಕ್ಟರ್ ಚಂದ್ರಶೇಖರ್, ಮುತ್ತಣ್ಣ, ಬಿಜೆಪಿ ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post