Sun. Dec 29th, 2024

ಅನೇಕ ವಚನಗಳನ್ನು ‌ಬರೆದ ಬೊಂತಾದೇವಿ:ಬಸವಯೋಗಿ ಪ್ರಭು

Share this with Friends

ಮೈಸೂರು,ಜೂ.15:ಬೊಂತಾದೇವಿಯವರು
ಬಿಡಾಡಿ ಎಂಬ ಅಚ್ಚಗನ್ನಡ ಅಂಕಿತದಿಂದ ಅನೇಕ ವಚನಗಳನ್ನು ಬರೆದಿದ್ದಾರೆ ಎಂದು
ಬಸವಕೇಂದ್ರದ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು,ಮೈಸೂರು ನಗರ ಘಟಕ ಹಾಗೂ ಕದಳಿ ಮಹಿಳಾ ವೇದಿಕೆಯ ವತಿಯಿಂದ ಶರಣ ದೇವರಾಜು ಪಿ. ಚಿಕ್ಕಹಳ್ಳಿ (ದೇಚಿ) ಅವರ ಬಸವಜ್ಯೋತಿ ಮಹಾಮನೆಯಲ್ಲಿ ನಡೆದ ಮನೆ ಮನೆಗೆ ಶರಣೆಯರ ಆಗಮನ ಕಾರ್ಯಕ್ರಮದಲ್ಲಿ ಶ್ರೀ ಗಳು ಮಾತನಾಡಿದರು.

ಬೊಂತಾದೇವಿಯ ಮೊದಲಿನ ಹೆಸರು ನಿಜದೇವಿ,ಶಿವಭಕ್ತಿಯಲ್ಲಿ ನಿಷ್ಠೆ ನೆಲೆಗೊಂಡು ವೈರಾಗ್ಯ ತಾಳಿ, ಕಲ್ಯಾಣಕ್ಕೆ ಬಂದು ಅವರು ನೆಲೆಸಿದರು,ಬೊಂತಾದೇವಿಯವರು ಶರಣ ಮೋಳಿಗೆಯ ಮಾರಯ್ಯನವರ ತಂಗಿ ಎಂದು ತಿಳಿಸಿದರು.

ಮರಿಯಾಲದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ಮಾಮಿಗಳು ಮಾತನಾಡಿ ಕಲ್ಯಾಣದ ಶರಣೆಯರ ನೆನೆದರೆ ಸಾಕು ನಿಜ ಬದುಕಿನ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ. ಮೈಸೂರು ಕೃಷ್ಣಮೂರ್ತಿ ರವರು ಶರಣೆ ಬೊಂತಾದೇವಿಯವರ ಕುರಿತು ಉಪನ್ಯಾಸ ನೀಡಿದರು.

ವೈರಾಗ್ಯದ ನಿಧಿ ಅಕ್ಕನ ಸರ್ವಗುಣಗಳನ್ನೂ ಹೊದ್ದಿದ್ದ ಬೊಂತಾದೇವಿಯವರು ಕಲ್ಯಾಣದ ಕಮಲದಂತೆ ಎಂದು ಬಣ್ಣಿಸಿದರು.

ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಾರದಾ ಶಿವಲಿಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


Share this with Friends

Related Post