ನವದೆಹಲಿ,ಫೆ.9: ಕೇಂದ್ರ ಸರ್ಕಾರ ಮತ್ತೆ ಮೂವರು ಮಹನೀಯರಿಗೆ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿದೆ
ಈ ಬಾರಿ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್,ಪಿ. ವಿ ನರಸಿಂಹರಾವ್, ಮತ್ತು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್ ಅವರಿಗೆ ಭಾರತರತ್ನ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಸರ್ಕಾರ ಐವರು ಸಾಧಕರಿಗೆ ಭಾರತ ರತ್ನ ಘೋಷಿಸಿದಂತಾಗಿದೆ.
ಇತ್ತೀಚೆಗಷ್ಟೇ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಘೋಷಣೆ ಮಾಡಲಾಗಿತ್ತು. ನಂತರ ಮಾಜಿ ಗೃಹ ಸಚಿವ, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿದ್ದನ್ನು ಸ್ಮರಿಸಬಹುದು.
ಚೌಧರಿ ಚರಣ್ ಸಿಂಗ್ 1979 ಜುಲೈ 28 ರಿಂದ 1980ರ ಜನವರಿ 14ರವರೆಗೆ ಪ್ರಧಾನಿಯಾಗಿದ್ದರೆ ಪಿ.ವಿ ನರಸಿಂಹ ರಾವ್ 1991ರ ಜೂನ್ 21 ರಿಂದ 1996 ಮೇ 16ರವರೆಗೆಪ್ರಧಾನಿಯಾಗಿದ್ದರು.
ಸ್ವಾಮಿನಾಥನ್ ಅವರು ಕೃಷಿ ವಿಜ್ಞಾನಿಯಾಗಿ ದೇಶದಲ್ಲಿ ಹಸಿರು ಕ್ರಾಂತಿ ಮಾಡಿದ್ದರು.