Wed. Dec 25th, 2024

ಬೈಕ್ – ಟಾಟಾ ಗೂಡ್ಸ್ ವಾಹನ ಡಿಕ್ಕಿ:ಬೈಕ್ ಸವಾರರ ದುರ್ಮರಣ

Share this with Friends

ಬೆಳಗಾವಿ,ಏ.20: ಬೈಕ್ ಮತ್ತು ಟಾಟಾ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರು ದಾರುಣವಾಗಿ ಮೃತಪಟ್ಟ ಘಟನೆ
ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಬಳಿ ಬೈಕ್ ಮತ್ತು ಟಾಟಾ ಗೂಡ್ಸ್ ವಾಹನ ಮಧ್ಯೆ ಅಪಘಾತ ಸಂಭವಿಸಿದೆ.

ಶಿವಾನಂದ ಖಾನಾಪುರ ಹಾಗೂ ಮಲ್ಲಪ್ಪ ಕೌಜಲಗಿ ಮೃತಪಟ್ಟ ದುರ್ದೈ‌ವಿಗಳು.

ಆನೆಗುಂದಿ ಗ್ರಾಮದಿಂದ ಲೋಕಾಪುರಕ್ಕೆ ಹೋಗುವ ಸಂದರ್ಭದಲ್ಲಿ ಬಟಕುರ್ಕಿ ಬಳಿ ಟಾಟಾ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ.

ಮಹಾರಾಷ್ಟ್ರದಿಂದ ರಾಮದುರ್ಗಕ್ಕೆ ಬರುತ್ತಿದ್ದ ಟಾಟಾ ಗೂಡ್ಸ್ ವಾಹನದಲ್ಲಿ 4 ಜನ ಇದ್ದು ಗಾಯಗೊಂಡಿದ್ದಾರೆ.

ತಕ್ಷಣ ರಾಮದುರ್ಗ ಡಿವೈಎಸ್ಪಿ ಪಾಂಡುರಂಗ ಮತ್ತು ಪಿಎಸ್ಐ ಸುನಿಲಕುಮಾರ್ ನಾಯಕ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post