Mon. Dec 23rd, 2024

ಬೈಕುಗಳು ಮುಖಾಮುಖಿ ಡಿಕ್ಕಿ;ಸವಾರ ಸಾವು

Share this with Friends

ಮೈಸೂರು,ಮೇ.29: ಎರಡು ಬೈಕ್‌ ಗಳ ನಡುವೆ ಮುಖಾಮಖಿ ಡಿಕ್ಕಿಯಾಗಿ ಒಬ್ಬ ಬೈಕ್ ಸವಾರ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ಈ ಘಟನೆ ನಂಜನಗೂಡು ತಾಲ್ಲೂಕಿನ ಗೀಕಹಳ್ಳಿಹುಂಡಿ ಗ್ರಾಮದ ಬಳಿ ನಡೆದಿದ್ದು,ಆಲಂಬೂರು ಗ್ರಾಮದ ಪವನ್ ಕುಮಾರ್ (19)ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಆಲಂಬೂರು ಮುಂಟಿ ಗ್ರಾಮದಿಂದ ನಂಜನಗೂಡು ಕಡೆಗೆ ಬೈಕ್ ನಲ್ಲಿ ಪವನ್ ಕುಮಾರ್ ತೆರಳುತ್ತಿದ್ದ. ನಂಜನಗೂಡು ಕಡೆಯಿಂದ ತಿ.ನರಸೀಪುರ ಕಡೆಗೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.

ಅಪಘಾತದಲ್ಲಿ ಪವನ್ ಕುಮಾರ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು,ತಕ್ಷಣ ಆತನನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ,ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಪವನ್ ಕುಮಾರ್ ಮೃತಪಟ್ಟಿದ್ದಾನೆ ಬೈಕ್ ಸವಾರನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪವನ್ ಕುಮಾರ್ ತಂದೆ ಮಹದೇವ ಬಿಳಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Share this with Friends

Related Post