ಬೆಂಗಳೂರು, ಫೆ.16: ಸಿಎಂ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ವಿರೋಧಿಸಿ ಬಿಜೆಪಿ ಶಾಸಕರು ಸದನದಿಂದ
ಹೊರನಡೆದರು.
ಬಿಜೆಪಿ ಶಾಸಕರು ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದು ಏನಿಲ್ಲಾ, ಏನಿಲ್ಲಾ, ಎಂದು ರಾಗವಾಗಿ ಹಾಡುತ್ತಾ ಬುರುಡೇ, ಬುರುಡೆ ಎಂದು ಕೂಗಿ ಬಜೆಟ್ ಬಹುಷ್ಕರಿಸಿದರು.
ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.ಕೆಲ ಶಾಸಕರು ಬರೀ ವೋಳು ಎಂದು ಕೂಗಿದರು
ಮುಖ್ಯ ಮಂತ್ರಿಗಳು ಬಜೆಟ್ ಮಂಡನೆ ಪ್ರಾರಂಭಿಸುತ್ತಿದ್ದಂತೆಯೇ ಬಿಜೆಪಿಯವರು ಗದ್ದಲ ಎಬ್ಬಿಸಿದರು.
ನಂತರ ವಿಧಾನ ಸೌಧದ ಮುಂಭಾಗ ಸೇರಿದ ಬಿಜೆಪಿ ಶಾಸಕರು ಸಿದ್ದರಾಮಯ್ಯನ ಬೋಗಸ್ ಬಜೆಟ್, ಬರೀ ಓಳು ಹೀಗೆ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಲಾಗಿದೆ,
ತೆರಿಗೆ ಸಂಗ್ರಹ ವಿಚಾರವಾಗಿ ಆರೋಪ ಮಾಡಲಾಗಿದೆ,ಜಿಎಸ್‌ಟಿ ಹಣ ಕಡಿಮೆ ಕೊಟ್ಟಿದ್ದಕ್ಕೂ ಆರೋಪ ಮಾಡಲಾಗಿದೆ ಹಾಗಾಗಿ ನಾವು ಬಜೆಟ್ ವಿರೋಧಿಸಿ ಹೊರಬಂದು ಪ್ರತಿಭಟನೆ ಮಾಡಿದ್ದೇವೆ ಎಂದು ಈ ವೇಳೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.