Fri. Dec 27th, 2024

ಸಿದ್ದರಾಮಯ್ಯ ಅವರಿಗೆ ವ್ಯಂಗ್ಯ ಭರಿತ ಟ್ವೀಟ್ ಮಾಡಿದ ಬಿಜೆಪಿ

Share this with Friends

ಬೆಂಗಳೂರು,ಏ.9: ಯುಗಾದಿ ಹಬ್ಬದ ದಿನವಾದ ಇಂದು ಕೂಡಾ ರಾಜ್ಯ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ
ವ್ಯಂಗಭರಿತವಾಗಿ ಟ್ವೀಟ್ ಮಾಡಿದೆ.

ಸಿದ್ದರಾಮಯ್ಯನವರಿಗೆ ಯುಗಾದಿ ಹಬ್ಬದ ಶುಭಾಶಯವನ್ನು ಬಿಜೆಪಿ ಕೋರಿದೆ, ಜೊತೆಗೆ ಇನ್ನಾದರೂ ಭಗವಂತ ಅವರಿಗೆ ಸದ್ಭುದ್ಧಿ ಕೊಡಲಿ ಎಂದು ಟ್ವೀಟ್ ಮಾಡಿದೆ.

ಕರ್ವಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ನಲ್ಲಿ ಈ ಪೋಸ್ಟ್ ಹಾಕಲಾಗಿದ್ದು ಅರಾಜಕತೆ, ತಮಿಳುನಾಡಿಗೆ ಕಾವೇರಿ ನೀರು, ಸುಳ್ಳು ಆರೋಪ, ರೈತರಿಗೆ ಬರ ಪರಿಹಾರ, ಮಹಿಳೆಯರ ರಕ್ಷಣೆ, ಭಯೋತ್ಪಾದನೆ ನಿಗ್ರಹ, ಬಡವರ ಪರ, ಕನ್ನಡಿಗರ ತೆರಿಗೆ ಹಣ, ಸಂಸ್ಕಾರವಂತ ನಾಲಿಗೆ, ಜಾತಿ ಧರ್ಮಗಳ ನಡುವೆ ಕಲಹ ಮೊದಲಾದ ವಿಚಾರಗಳನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಲೆಳೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ಎಲೆ ಉದುರಿ ಹೊಸ ಚಿಗುರು ಮೂಡುವ ಸಮಯ ಬಂದಿದೆ. ಇನ್ನಾದರೂ ಭಗವಂತ ಸದ್ಬುದ್ಧಿ ಕರುಣಿಸಿ ಬದಲಾವಣೆ ತರಲೆಂದು ವಿಘ್ನ ವಿನಾಶಕ ವಿನಾಯಕನಲ್ಲಿ ಕರುನಾಡು ಮೊರೆಯಿಡುತ್ತಿದೆ ಎಂದು ಬರೆದಿದೆ.

ಅರಾಜಕತೆಯನ್ನು ಹೋಗಲಾಡಿಸುವ ಬುದ್ಧಿ ನೀಡಲಿ,ಕಾವೇರಿಯನ್ನು ತಮಿಳುನಾಡಿಗೆ ಹರಿಸದೆ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಸ್ಥೈರ್ಯ ತೋರಿಸಲಿ,
ಸುಳ್ಳು‌ ಹೇಳುವುದನ್ನು ಕಡಿಮೆ ಮಾಡುವ ಜ್ಞಾನ ನೀಡಲಿ,ರೈತರಿಗೆ ಬರ ಪರಿಹಾರ ನೀಡುವಂತಹ ಗುಣ ಕರುಣಿಸಲಿ,
ಮಹಿಳೆಯರ ರಕ್ಷಣೆ ಮಾಡುವ ಹೊಣೆ ಹೊರುವಂತಾಗಲಿ,ಭಯೋತ್ಪಾದಕರನ್ನು ಹತ್ತಿಕ್ಕುವ ಧೈರ್ಯ ತುಂಬಲಿ.

ಇಷ್ಟು ಬುದ್ಧಿಯನ್ನು ಆ ಭಗವಂತ ಕರುಣಿಸಿ‌ಬಿಟ್ಟರೆ, ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ-ಬೆಳೆಯಾಗಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಲಿದೆ ಎಂದು ಬಿಜೆಪಿಯಿಂದ ಬರೆಯಲಾಗಿದೆ.


Share this with Friends

Related Post