ಬೆಂಗಳೂರು : ಅಮೇರಿಕ ಮೂಲದ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಯೂನಿಸಿಸ್ ಇಂಡಿಯಾ ಮತ್ತು ರಾಜ್ಯದಲ್ಲಿ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಮಾಡಿರುವಾ ಸೇವಾ ಸಂಸ್ಥೆ ದಿ ಫಾರ್ವಡ್ ಫೌಂಡೇಶನ್ ಸಹಯೋಗದಲ್ಲಿ ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಏಕ ಕಾಲದಲ್ಲಿ ಬೃಹತ್ ರಕ್ತದಾನ ಶಿಬಿರ ಅಯೋಜಿಸಲಾಗಿತ್ತು.
ದಿ ಫಾರ್ವಡ್ ಫೌಂಡೇಶನ್ ಸಂಸ್ಥೆಯ ಪ್ರಯತ್ನ ಮತ್ತು ಯೂನಿಸಿಸ್ ಸಂಸ್ಥೆಯ ಉದ್ಯೋಗಿಗಳ ಸಹಕಾರದಿಂದ ನಡೆದ ಎರಡು ನಗರಗಳ ರಕ್ತದಾನ ಶಿಬಿರ ರೋಗಿಗಳಿಗೆ ಜೀವದಾನ ನೀಡುವಂತ ಕಾರ್ಯ ಆಗಿರುವುದು ಶ್ಲಾಘನೀಯ. ಬೆಂಗಳೂರಿನ ಬಿಎಸ್’ಕೆ ಜೀವಾಶ್ರಯ ರಕ್ತ ಕೇಂದ್ರ ಮತ್ತು ಸ್ವಾಮಿ ವಿವೇಕಾನಂದ ಸ್ವಯಂಪ್ರೇರಿತ ರಕ್ತ ಕೇಂದ್ರ ಮತ್ತು ಹೈದರಾಬಾದಿನಲ್ಲಿ ಅಲ್ಲಿನ ಎನ್’ಐಜಿಎಲ್ ರಕ್ತ ಕೇಂದ್ರ ಜಂಟಿಯಾಗಿ ರಕ್ತದಾನ ಶಿಬಿರ ಅಯೋಜನೆ ಮಾಡಲಾಗಿತ್ತು. ಒಟ್ಟು 224 ಯೂನಿಟ್ ಗಳಷ್ಟು ರಕ್ತ ಸಂಗ್ರಹ ಆಗಿದೆ.
ಸರ್ಜಾಪುರ ರಸ್ತೆಯ ಆರ್’ಜಿಎ ಟೆಕ್ ಪಾರ್ಕಿನಲ್ಲಿ ಇರುವ ಯೂನಿಸಿಸ್ ಗ್ಲೋಬಲ್ ಸರ್ವಿಸ್ ಇಂಡಿಯಾ ಕಟ್ಟಡದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ರಕ್ತದಾನ ಶಿಬಿರ ನಡೆಯಿತು. ಉದ್ಯೋಗಿಗಳಿಗೆ ವಿವಿಧ ಸಮಯದ ಪಾಳಿ (Shift) ಇದ್ದರು ರಕ್ತದಾನ ಮಾಡಲು ಹೆಚ್ಚವರಿ ಸಮಯವನ್ನು ಮಿಸಲಿಟ್ಟು ರಕ್ತದಾನ ಮಾಡಿದರು.
ಇದೇ ವೇಳೆ ಹಲವರು ರಕ್ತದೊತ್ತಡ, ರಕ್ತದ ಪ್ರಮಾಣ ಸೇರಿದಂತೆ ಅರೋಗ್ಯ ಅಧಿಕಾರಗಳ ಬಳಿ ತಪಾಸಣೆ ಮಾಡಿಸಿಕೊಂಡರು. ಆರೋಗ್ಯ ಸಲಹೆಗಳನ್ನು ಐಟಿ ಉದ್ಯೋಗಿಗಳು ಪಡೆದುಕೊಂಡರು. ರಕ್ತದಾನ ಮಾಡಲು ಬರುವವರಿಗೆ ಅರ್ಜಿ ಭರ್ತಿಮಾಡಲು, ಕುಳಿತುಕೊಳ್ಳಲು, ಗೊಂದಲ ಆಗದಂತೆ ಒಬ್ಬೊಬ್ಬರನ್ನೇ ರಕ್ತದಾನ ಮಾಡಲು ಫೌಂಡೇಶನ್ನಿನ ಮತ್ತು ಸಂಸ್ಥೆಯ ಯೂನಿಕೇರ್ ತಂಡ ಕಳುಹಿಸುತ್ತಿದ್ದರು. ಇಂತಹ ಸಮಾಜಮುಖಿ ಕಾರ್ಯಗಳು ಈ ಎರಡು ಸಂಸ್ಥೆಗಳಿಂದ ನಿರಂತರವಾಗಿ ನಡೆಯುತ್ತಿರಲಿ ಎಂಬುದು ನಮ್ಮ ಆಶಯ.