ಮೈಸೂರು, ಜೂ.17: ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ,ರಕ್ತದಾನ ಮಾಡಿ ಜೀವ ಉಳಿಸಲು ಮುಂದಾಗಬೇಕು ಎಂದು ಪ್ರಸೂತಿ ತಜ್ಞೆ ಡಾ.ಬಿಂದು ಬಾಲಸುಬ್ರಮಣ್ಯ ತಿಳಿಸಿದರು.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ಬೋಗಾದಿಯ ರೂಪ ನಗರದ ಕಾರುಣ್ಯ ಮನೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು
ರಕ್ತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಅಪಘಾತ ಸಹಿತ ತುರ್ತು ಅವಘಡದಲ್ಲಿ ಸಿಲುಕಿದವರಿಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ದಾನಿಗಳ ಮೂಲಕವೇ ಅವಶ್ಯ ವಿದ್ದವರಿಗೆ ಪೂರೈಸಬೇಕು ಎಂದು ಹೇಳಿದರು.
ರಕ್ತಕ್ಕೆ ಜಾತಿ, ಧರ್ಮದ ಭೇದವಿಲ್ಲ, ಅಪಘಾತ ಸಹಿತ ತುರ್ತು ಅವಘಡದಲ್ಲಿ ಸಿಲುಕಿದವರಿಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ದಾನಿಗಳ ಮೂಲಕವೇ ಅವಶ್ಯ ವಿದ್ದವರಿಗೆ ಪೂರೈಸಬೇಕಾಗಿದೆ.
ಈ ನಿಟ್ಟಿನಲ್ಲಿ ಎಲ್ಲ ಅರ್ಹ ದಾನಿಗಳು ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಒಳ್ಳೆಯತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಾ.ಬಿಂದು ಸಲಹೆ ನೀಡಿದರು.
ಜನಸೇವಕ ಯುವ ಬ್ರಿಗೇಡ್,ಅಧ್ಯಕ್ಷ ರಾಘವೇಂದ್ರ ಡಿ, ಬಿಜೆಪಿ ಮುಖಂಡ ನಂಜುಂಡಸ್ವಾಮಿ,ಕಾರುಣ್ಯ ಮನೆ ವಾರ್ಡನ್ ಸುಲೋಚನಾ,ಪ್ರೊಫೆಸರ್ ಪ್ರಿಯಾ ಮಧುಸೂದನ್, ಸ್ಪಂದ ರಾಜೇಶ್, ಮತ್ತಿತರರು ಹಾಜರಿದ್ದರು.