Wed. Dec 25th, 2024

ಬೈಕ್ ಗೆ ಬೊಲೆರೊ ಗೂಡ್ಸ್ ವಾಹನ ಡಿಕ್ಕಿ: ಮೂವರ ದುರ್ಮರಣ

Share this with Friends

ಹಾಸನ,ಜೂ.22: ಅತೀ ವೇಗವಾಗಿ‌ ಚಲಿಸಿದ ಬೊಲೆರೊ ಗೂಡ್ಸ್‌ ವಾಹನ ಹಿಂದಿನಿಂದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ‌‌ ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನದ ಪೊಲೀಸ್ ಕ್ವಾರ್ಟರ್ಸ್ ನಿವಾಸಿ‌ ಸಯ್ಯದ್ ವಾಹಿದ್(37),ಹಾಸನ ಅಂಬೇಡ್ಕರ್ ನಗರದ ನಿವಾಸಿ ಜೆಮ್ ಶಿದ್ ಪಾಷ(52),ಮತ್ತು ಹಾಸನ ವಿಶ್ವನಾಥ ನಗರದ‌ ವಾಸಿ ಹರೀಶ್(45) ಮೃತಪಟ್ಟ ದುರ್ದೈವಿಗಳು.

ಸೈಯದ್ ವಾಹೀದ್, ಜಿಮ್ ಶೀದ್ ಪಾಷಾ ಮತ್ತು ಹರೀಶ ಅವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಶಾಂತಿಗ್ರಾಮದ ಪವರ್ ಗ್ರೀಡ್ ಸಮೀಪ ಅಪಘಾತವಾಗಿದೆ.

ಹರೀಶ ಬೈಕ್ ಚಾಲನೆ ಮಾಡಿಕೊಂಡು ಸೈಯದ್ ವಾಹೀದ ಮತ್ತು ಜೆಮ್ ಶೀದ್ ಪಾಷಾ ಅವರನ್ನು ಹಿಂಬದಿ ಕೂರಿಸಿಕೊಂಡು ಹಾಸನದಿಂದ ಚನ್ನರಾಯಪಟ್ಟಣ ಕಡೆಗೆ ಹೋಗುತ್ತಿದ್ದಾಗ ಪವರ್ ಗ್ರೀಡ್ ಸಮೀಪ ಹಾಸನದ ಕಡೆಯಿಂದ ಚನ್ನರಾಯಪಟ್ಟಣ ಕಡೆಗೆ ಬಂದ ಬೊಲೆರೋ ಗೋಡ್ಸ್ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಬಂದು ಹರೀಶ್ ಚಾಲನೆ ಮಾಡುತ್ತಿದ್ದ ಬೈಕಿಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದಿದ್ದಾನೆ.

ಇದರ ಪರಿಣಾಮ ಮೂರು ಜನರು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದಾರೆ. ಸಯ್ಯದ್ ವಾಹೀದ ಮತ್ತು ಜೆಮ್ ಶೀದ್ ಪಾಷಾ ಸ್ಮಳದಲ್ಲೇ ಮೃತಪಟ್ಟಿದ್ದು ಬೈಕ್ ಚಾಲನೆ ಮಾಡುತ್ತಿದ್ದ ಹರೀಶ ಹಾಸನಾಂಬಾ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5-30‌ ರಲ್ಲಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಶಾಂತಿಗ್ರಾಮ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post