ಮೈಸೂರು, ಜು.17: ಮೈಸೂರಿನ ಸಿದ್ದಾರ್ಥ ಲೇಔಟ್ ಅಲ್ಲಿರುವ ಹೊಸ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಟಿ ಮಾಲ್ ವಿರುದ್ಧ ರೈತರು ಪೊರಕೆ ಚಳವಳಿ ನಡೆಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತ್ರತ್ವದಲ್ಲಿ ರೈತರು ಜಿ.ಟಿ ಮಾಲ್ ವಿರುದ್ಧ ರೈತರು ಧಿಕ್ಕಾರ ಕೂಗಿ ಪೊರಕೆ ಚಳವಳಿ ನಡೆಸಿದರು.
ಈ ವೇಳೆ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ನಿನ್ನೆ ಬೆಂಗಳೂರಿನಲ್ಲಿ ಜಿ.ಟಿ ಮಾಲ್ ನಲ್ಲಿ ಪಂಚೆ ಹಾಕಿಕೊಂಡು ಬಂದ ರೈತರಿಗೆ ಪ್ರವೇಶವಿಲ್ಲ ಎಂದು ಹೇಳಿ ರೈತ ವರ್ಗಕ್ಕೆ ಮಾಡಿದ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಭಾರತ ದೇಶದಲ್ಲಿ ರೈತ ಈ ದೇಶದ ಬೆನ್ನೆಲುಬು ಹಾಗೂ ಬಹು ಸಂಖ್ಯಾತ ವರ್ಗವನ್ನು ಹೊಂದಿರುವ ಈ ದೇಶಕ್ಕೆ ಅನ್ನ ನೀಡುವ ಅನ್ನದಾತನನ್ನು ಪಂಚೆ ಹಾಕಿಕೊಂಡು ಬಂದರೆ ಮಾಲ್ ನ ಒಳಗೆ ಪ್ರವೇಶವಿಲ್ಲ ಎಂಬುದು ಪಂಚೆ ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸುವ ಪ್ರಧಾನ ಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿ ಎಂಎಲ್ಎ, ಎಂಪಿ ಗಳಿಗೂ ಸಹ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಬಂಡವಾಳ ಶಾಹಿಗಳು ಮತ್ತು ರಾಜಕಾರಣಿಗಳು ಪಂಚೆ ಹಾಕಿಕೊಂಡು ಬಂದರೂ ಸಹ ಯಾವುದೇ ಚಕಾರ ಎತ್ತದ ಮಾಲ್ ಗಳು ರೈತರ ಬಗ್ಗೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಸರ್ಕಾರ ರೈತ ವಿರೋಧಿ ತೋರುವ ಮಾಲುಗಳು,ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಸೂಕ್ತ ಕಾನೂನು ಜಾರಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ ಹತ್ತಳ್ಳಿ ಸೌಮ್ಯರಾಜ್, ಹಾಡ್ಯ ರವಿ, ಹಾಲಿನ ನಾಗರಾಜ್, ರಾಜ್ಯ ಪ್ರದಾನಕಾರ್ಯದರ್ಶಿ ಮಲೆಯೂರು ಹರ್ಷ, ಅರಳಿ ಕಟ್ಟೆ ಕುಮಾರ್, ಉಡಿಗಾಲ ರಾಜಶೇಖರಪ್ಪ, ಗುರುವಿನಪುರ ಮೋಹನ್, ಆನಂದ, ಮಲೆಮಾದಪ್ಪ, ಕಸುನಹಳ್ಳಿ ಮಂಜೇಶ್, ದೇವನೂರು ನಾಗೇಂದ್ರ, ಹೊಸಪುರ ಮಾದಪ್ಪ, ಅಂಡುವಿನಹಳ್ಳಿ ಜಗದೀಶ್, ಮುದ್ದಳ್ಳಿ ಚಿಕ್ಕಸ್ವಾಮಿ, ರೇವಣ್ಣ ಕುಮಾರ್, ಒಳಗೆರೆ ಗಣೇಶ್, ದೇವಿರಾಮ್ನಳ್ಳಿ ಡಿ.ಸಿ ಸಿದ್ದಲಿಂಗು, ಸುರೇಶ್ ಹುಂಡಿ ಮಹೇಶ್ ಮತ್ತಿತರರು ಹಾಜರಿದ್ದರು.