Sat. Jan 4th, 2025

ಕ್ಷುಲ್ಲಕ ವಿಚಾರಕ್ಕೆ ಜಗಳ:ತಂಗಿಯ ಕೊಂದ ಅಣ್ಣ

Share this with Friends

ಕೊಳ್ಳೇಗಾಲ: ಜ.2: ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಅಣ್ಣ ತನ್ನ ಸಹೋದರಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.

ಈದ್ಗಾ ಮೊಹಲ್ಲಾದ ಸೈಯದ್ ಪಾಷಾ ಅವರ ನಾಲ್ಕನೇ ಮಗಳು ಐಮನ್ ಬಾನು (23) ಕೊಲೆಯಾದ ಯುವತಿ. ಈಕೆಯ ಅಣ್ಣ ಫರ್ಮನ್ ಪಾಷಾ ಕೊಲೆ ಮಾಡಿದ್ದಾನೆ.

ರಾತ್ರಿ ಅಣ್ಣ,ತಂಗಿ ಜಗಳವಾಡಿದ್ದಾರೆ‌ ಅದನ್ನು ಬಿಡಿಸಲು ಬಂದ ತಂದೆ, ಅತ್ತಿಗೆ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಸೈಯದ್ ಪಾಷಾ ಅವರಿಗೆ ಮೂರು ಹೆಣ್ಣು ಎರಡು ಗಂಡು ಒಟ್ಟು ಐದು ಮಕ್ಕಳು. ದೂರುದಾರರ ಹಿರಿಯ ಮಗ ಸೈಯದ್ ರೋಶನ್ ಅವರು ರಾತ್ರಿ ಮಗು ಮಲಗಿಕೊಳ್ಳುವ ವಿಚಾರ ಎತ್ತಿದ್ದಾರೆ.ಆಗ ಆರೋಪಿ ಫರ್ಮನ್ ಪಾಷಾ ನಾನು ಊಟ ಮಾಡುವವರೆಗೆ ಮಗು ಮಲಗಿಕೊಳ್ಳುವುದು ಬೇಡ ಎಂದು ತಗಾದೆ ತೆಗೆದಿದ್ದಾನೆ.

ಇದಕ್ಕೆ ಮೃತ ಐಮನ್ ಬಾನು ಎಲ್ಲಾ ಇವನು ಹೇಳಿದ ಹಾಗೆ ನಡೆಯಬೇಕು ಮಲಗಿಕೊಳ್ಳಲಿ ಬಿಡು ಎಂದು ಹೇಳಿದ್ದಾಳೆ ಈ ವೇಳೆ ಸಣ್ಣದಾಗಿ ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿ ಸಹೋದರಿ ಐಮನ್ ಬಾನು ಮೇಲೆ ಫರ್ಮನ್ ಪಾಷಾ ಹಲ್ಲೆ ಮಾಡಿ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ.

ಈ ವೇಳೆ ಜಗಳ ಬಿಡಿಸಲು ಬಂದ ಅತ್ತಿಗೆ ತಸ್ಲಿಮ್ ತಾಜ್ ಳ ಕುತ್ತಿಗೆಗೂ ಚಾಕುವಿನಿಂದ ಕುಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಾಗೂ ತಡೆಯಲು ಬಂದ ತಂದೆ ಸೈಯದ್ ಪಾಷಾ ಮೇಲೂ ಹಲ್ಲೆ ನಡೆಸಿ ಕೈ ಮುರಿದಿದ್ದಾನೆ.

ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Share this with Friends

Related Post