ರಾಮನಗರ,ಮಾ.1: ರಾಮನಗರ ಘಟಕದಿಂದ 15 ವಾಹನಗಳನ್ನು ಮಾತ್ರ ಕುಣಿಗಲ್ ಸಮಾವೇಶಕ್ಕೆ ನೀಡಲಾಗಿದ್ದು,
ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಲರಾಮನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಗ್ರಾಮಾಂತರ ಸಾರಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಬಸ್ ಗಳನ್ನು ಕುಣಿಗಲ್ ಸಮಾವೇಶಕ್ಕೆ ಆಚರಣೆ ಮಾಡುವ ಬಗ್ಗೆ ರಾಮನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಮಾಧ್ಯಮದವರು ಮಾಹಿತಿ ಪಡೆದಿದ್ದು, ವಿದ್ಯಾರ್ಥಿಗಳಿಗೆ ಅಥವಾ ಪ್ರಯಾಣಿಕರಿಗೆ ತೊಂದರೆ ಆಗಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದರೂ ತಪ್ಪು ಮಾಹಿತಿ ಪ್ರಕಟಿಸಲಾಗಿದೆ
ಬಸ್ ಗಳ ಕೊರತೆ ಬಗ್ಗೆ ಯಾವುದೇ ದೂರುಗಳು ವಿದ್ಯಾರ್ಥಿಗಳಿಂದಾಗಲಿ ಅಥವಾ ಪ್ರಯಾಣಿಕರಿಂದಾಗಲಿ ಬಂದಿಲ್ಲ, ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು ಹಾಜರಿದ್ದು ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಬಸ್ ನಿಲ್ದಾಣದಲ್ಲಿ ಸಾಮಾನ್ಯವಾದ ಟ್ರಾಫಿಕ್ ಇದ್ದು, ಪ್ರಯಾಣಿಕರಿಗೆ ಬಸ್ ಗಳ ಕೊರತೆ ಖಂಡಿತಾ ಆಗಿಲ್ಲ ಈ ಬಗ್ಗೆ ತಪ್ಪು ಮಾಹಿತಿ ಹರಡಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.
ಈಗ ಪ್ರಕಟವಾದ ಬಸ್ ನಿಲ್ದಾಣದ ಚಿತ್ರಣವು ಹಳೆಯದಾಗಿದ್ದು, ಇಂದು ಬೆಳಗ್ಗೆ 9 ಗಂಟೆಯ ಬಸ್ ನಿಲ್ದಾಣದ ಚಿತ್ರವನ್ನು ಲಗತ್ತಿಸಲಾಗಿದೆ
ಈಗಾಗಲೇ ಎಲ್ಲಾ ವಿಭಾಗಗಳಿಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ಸುಗಳ ಕಾರ್ಯಾಚರಣೆ ಮಾಡಲು ಆದೇಶಿಸಿದ್ದೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟವಾಗಿ ಹೇಳಿದ್ದಾರೆ.