Tue. Dec 24th, 2024

ಎಂ ಲಕ್ಷ್ಮಣ ಪರ ಕಾಂಗ್ರೆಸ್ ಕಾರ್ಯಕರ್ತರ ಬಿರುಸಿನ ಪ್ರಚಾರ

Share this with Friends

ಮೈಸೂರು, ಏ.19: ಮೈಸೂರು-ಕೊಡಗು‌ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಎಂ.ಲಕ್ಷ್ಮಣ್ ಪರ ಇಂದು ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದರು.

ನಗರದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಅಂಬೇಡ್ಕರ್ ನಗರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯುಳ್ಳ ಕರಪತ್ರವನ್ನು ಮನೆ ಮನೆಗೆ ನೀಡಿ ಮತ ಯಾಚಿಸಿದರು.

ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಅಲ್ಪಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷ ಮೋಸಿನ್ ಖಾನ್, ಚಾಮುಂಡೇಶ್ವರಿ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಆರಿಫ್, ಲೋಕೇಶ್, ನೌಷದ್ ಹುಸೇನ್, ವರುಣ ಮಹದೇವ್, ಮಹೇಶ್ ಗಂಗಣ್ಣ ಮತ್ತಿತರರು ಮೈಸೂರು ಮತ್ತು ಕೊಡಗು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.


Share this with Friends

Related Post