Fri. Mar 6th, 2026

ರೈಲು ಪ್ರಯಾಣಿಕರಿಗೆ ಅಪ್ ಡೇಟ್:ಕೆಲ ರೈಲು ಸೇವೆಗಳಲ್ಲಿ ಬದಲಾವಣೆ

Share this with Friends

ಮೈಸೂರು: ರೈಲ್ವೆ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಕೆಲ ರೈಲುಗಳ ರದ್ದತಿ, ಭಾಗಶಃ ರದ್ದತಿ, ಮಾರ್ಗ ಬದಲಾವಣೆ ಮತ್ತು ಕೆಲ ರೈಲುಗಳ ನಿಯಂತ್ರಣ ಹಾಗು ಮರುನಿಗದಿ ಕುರಿತು ಮಾಹಿತಿ ನೀಡಿದ್ದು, ಪ್ರಯಾಣಿಕರು ಈ ಮಾಹಿತಿ ಗಮನಿಸಿ ಪ್ರಯಾಣಕ್ಕೆ ಸಿದ್ದರಾಗುವಂತೆ ಮನವಿ ಮಾಡಿದೆ.

ದೇವರಗುಡ್ಡ ಮತ್ತು ಬ್ಯಾಡಗಿ ನಡುವಿನ ಎಲ್‌ಸಿ ಸಂಖ್ಯೆ 222 ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಇರುವುದರಿಂದ ಕೆಲ ರೈಲು ಸೇವೆಗಳನ್ನು ಪೂರ್ಣವಾಗಿ ರದ್ದುಗೊಳಿಸಲಾಗುತ್ತದೆ, ಕೆಲವನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ, ಇನ್ನು ಕೆಲ ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮತ್ತು ಮರು ನಿಗದಿಪಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

I. ರೈಲುಗಳ ರದ್ದುಪಡಿಕೆ:

ರೈಲು ಸಂಖ್ಯೆ 16214 ಎಸ್‌ಎಸ್‌ಎಸ್ ಹುಬ್ಬಳ್ಳಿ – ಅರಸೀಕೆರೆ ಎಕ್ಸ್‌ಪ್ರೆಸ್ ದಿನಾಂಕ 16.02.2026 ರಂದು ರದ್ದುಪಡಿಸಲಾಗುತ್ತದೆ.

ಕೆಳಕಂಡ ರೈಲುಗಳನ್ನು ದಿನಾಂಕ 17.02.2026 ರಂದು ರದ್ದುಪಡಿಸಲಾಗುತ್ತದೆ:

ರೈಲು ಸಂಖ್ಯೆ 16213 ಅರಸೀಕೆರೆ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್

ರೈಲು ಸಂಖ್ಯೆ.12080 ಎಸ್‌ಎಸ್‌ಎಸ್ ಹುಬ್ಬಳ್ಳಿ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 26752 ಕೆಎಸ್‌ಆರ್ ಬೆಂಗಳೂರು – ಬೆಳಗಾವಿ ವಂದೇ ಭಾರತ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17347 ಎಸ್‌ಎಸ್‌ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 17348 ಚಿತ್ರದುರ್ಗ – ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರದ್ದುಗೊಳ್ಳಲಿದೆ.

II. ರೈಲುಗಳ ಭಾಗಶಃ ರದ್ದುಪಡಿಕೆ:

ರೈಲು ಸಂಖ್ಯೆ 17310 ವಾಸ್ಕೊ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ ದಿನಾಂಕ 16.02.2026 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ – ಯಶವಂತಪುರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಲ್ಲಿ ಪ್ರಯಾಣ ಕೊನೆಗೊಳಿಸಲಿದೆ.

ರೈಲು ಸಂಖ್ಯೆ 17309 ಯಶವಂತಪುರ – ವಾಸ್ಕೊ ಡ ಗಾಮಾ ಎಕ್ಸ್‌ಪ್ರೆಸ್ ದಿನಾಂಕ 17.02.2026 ರಂದು ಯಶವಂತಪುರ – ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಯಶವಂತಪುರದ ಬದಲಾಗಿ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ, ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ದಿನಾಂಕ 17.02.2026 ರಂದು ಧಾರವಾಡ – ಹರಿಹರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಧಾರವಾಡದ ಬದಲಾಗಿ ಹರಿಹರದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

III. ರೈಲುಗಳ ಮಾರ್ಗ ಬದಲಾವಣೆ:

ರೈಲು ಸಂಖ್ಯೆ 16588 ಬಿಕಾನೆರ್ – ಯಶವಂತಪುರ ಎಕ್ಸ್‌ಪ್ರೆಸ್, ದಿನಾಂಕ 15.02.2026 ರಂದು ತನ್ನ ಪ್ರಯಾಣದಲ್ಲಿ, ಗದಗ – ಹೊಸಪೇಟೆ – ಕೊಟ್ಟೂರು – ಅಮರಾವತಿ – ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತನ್ನ ನಿಯಮಿತ ನಿಲುಗಡೆಗಳಾದ ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ರಾಣೆಬೆನ್ನೂರು ನಿಲ್ದಾಣಗಳಿಂದ ಹೊರಡುವುದಿಲ್ಲ.

ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು – ಸಿಂಧನೂರು ಎಕ್ಸ್‌ಪ್ರೆಸ್, ದಿನಾಂಕ 17.02.2026 ರಂದು ತನ್ನ ಪ್ರಯಾಣದಲ್ಲಿ, ದಾವಣಗೆರೆ – ಅಮರಾವತಿ – ಕೊಟ್ಟೂರು – ಹೊಸಪೇಟೆ – ಗಿಣಿಗೇರಾ – ಸಿಂಧನೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹರಿಹರ, ಚಳಗೇರಿ, ರಾಣೆಬೆನ್ನೂರು, ದೇವರಗುಡ್ಡ, ಬ್ಯಾಡಗಿ, ಹಾವೇರಿ, ಕರಜ್ ಗಿ, ಕಳಸೂರು, ಸವಣೂರು, ಯಲವಿಗಿ, ಕಲಸ, ಗುಡಗೇರಿ, ಸಂಶಿ, ಕುಂದಗೋಳ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಶಿಶ್ವಿನಹಳ್ಳಿ, ಅಣ್ಣಿಗೇರಿ, ಗದಗ ಜಂಕ್ಷನ್, ತಳಕಲ್ಲ, ಬಾಣಾಪುರ ಮತ್ತು ಕೊಪ್ಪಳ ನಿಲ್ದಾಣಗಳಿಂದ ಹೊರಡುವುದಿಲ್ಲ.

IV. ರೈಲುಗಳ ಮರುನಿಗದಿ:

ರೈಲು ಸಂಖ್ಯೆ 17325 ಬೆಳಗಾವಿ – ಮೈಸೂರು ಎಕ್ಸ್‌ಪ್ರೆಸ್, ದಿನಾಂಕ 17.02.2026 ರಂದು ಬೆಳಗಾವಿಯಿಂದ ಹೊರಡುವಾಗ 120 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ ಹಾಗೂ ಮಾರ್ಗ ಮಧ್ಯೆ 45 ನಿಮಿಷಗಳ ಕಾಲ ಮರುನಿಗದಿಗೊಳ್ಳಲಿದೆ.

V. ರೈಲುಗಳ ನಿಯಂತ್ರಣೆ:

ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್, ದಿನಾಂಕ 08.02.2026 ರಂದು ಪ್ರಾರಂಭವಾಗುವ ಪ್ರಯಾಣದಲ್ಲಿ 30 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16589 ಕೆಎಸ್‌ಆರ್ ಬೆಂಗಳೂರು – ಸಾಂಗ್ಲಿ ಎಕ್ಸ್‌ಪ್ರೆಸ್, ದಿನಾಂಕ 08.02.2026 ರಂದು ಮಾರ್ಗ ಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 12650 ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್‌ಪ್ರೆಸ್, ದಿನಾಂಕ 09.02.2026 ರಂದು ಮಾರ್ಗ ಮಧ್ಯೆ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16535 ಮೈಸೂರು – ಪಂಡರಾಪುರ ಎಕ್ಸ್‌ಪ್ರೆಸ್, ದಿನಾಂಕ 10.02.2026 ರಂದು ಮಾರ್ಗ ಮಧ್ಯೆ 50 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 11022 ತಿರುನೇಲ್ವೇಲಿ ಜಂಕ್ಷನ್ – ದಾದರ್ ಎಕ್ಸ್‌ಪ್ರೆಸ್, ದಿನಾಂಕ 16.02.2026 ರಂದು ಮಾರ್ಗ ಮಧ್ಯೆ 110 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.


Share this with Friends

Related Post