Tue. Dec 24th, 2024

ಕಾರು ಅಪಘಾತ:ನಟಿ ಪವಿತ್ರ ಜಯರಾಂ ಸಾವು

Share this with Friends

ಬೆಂಗಳೂರು, ಮೇ.12: ಆಂದ್ರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ಮೃತಪಟ್ಟಿದ್ದಾರೆ.

ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಕರ್ನೂಲಿನ ಬಳಿ ನಟಿ ಪವಿತ್ರಾ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು,ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮುಂಜಾನೆ ಪವಿತ್ರಾ ಜಯರಾಮ್ ಅವರು ಕರ್ನಾಟಕದಿಂದ ಹೈದರಾಬಾದ್‌ ಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮಹೆಬೂಬ್‌ ನಗರ ಜಿಲ್ಲೆ ಭೂತ್‌ ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ.

ಪವಿತ್ರಾ ಜಯರಾಮ್ ಅವರು ಕುಟುಂಬ ಸಮೇತ ಕಾರಿನಲ್ಲಿ ಹೈದರಾಬಾದ್‌ ಗೆ ಹೋಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ ಗೆ ಡಿಕ್ಕಿ ಹೊಡೆದಿದೆ.

ಜೊತೆಗೆ ಹೈದರಾಬಾದ್‌ ನಿಂದ ವನಪರ್ತಿಗೆ ಬರುತ್ತಿದ್ದ ಬಸ್‌ ಗೂ ಡಿಕ್ಕಿಯಾಗಿದೆ. ಅಪಘಾತದ ವೇಳೆ ಪವಿತ್ರ ಅವರ ಕುಟುಂಸ್ಥರು ಹಾಗೂ ಆಕೆಯ ಸಹ ನಟರು ಇದ್ದರು ಎಂದು ತಿಳಿದು ಬಂದಿದ್ದಾರೆ.

ಮೂಲತಃ ಮಂಡ್ಯ ತಾಲೂಕಿನ ಹನಕೆರೆಯ ಪವಿತ್ರಾ ಜಯರಾಂ ಕನ್ನಡ ರೋಬೋ ಫ್ಯಾಮಿಲಿ ಹಾಸ್ಯ ಧಾರಾವಾಹಿಯಿಂದ ನಟನೆಗೆ ಪಾದಾರ್ಪಣೆ ಮಾಡಿದರು.

ಕನ್ನಡದಲ್ಲಿ ರೋಬೋ ಫ್ಯಾಮಿಲಿ ಜೋಕಾಲಿ,ನೀಲಿ, ರಾಧಾರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ನಂತರ ತೆಲುಗಿನ ತ್ರಿನಯನಿ ಧಾರವಾಹಿಯ ಮೂಲಕ ತೆಲುಗು ರಾಜ್ಯಗಳಲ್ಲೂ ಬಹಳ ಜನಪ್ರಿಯರಾಗಿದ್ದರು.


Share this with Friends

Related Post